ಸುಳ್ಯ : ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ 10ನೇ ತರಗತಿಯವರಿಗೆ ವಿದಾಯಕೂಟ ಸಮಾರಂಭವು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಮಾತನಾಡಿ, ಎಲ್ಲರೂ ಮೌಲ್ಯಗಳ ಆದರ್ಶದಲ್ಲಿ ಸಂಸ್ಕೃತಿಯನ್ನು ಪಸರಿಸುವ ಕೆಲಸ ಮಾಡಬೇಕು. ಯಾವುದೇ ಭಾಷೆಗಳು ಗಟ್ಟಿಯಾದರೆಜ್ಞಾನ ಹೆಚ್ಚಾಗುವುದು. ಜ್ಞಾನವನ್ನು ಹೆಚ್ಚಿಸಿಕೊಂಡರೆ ನಮ್ಮ ಭಯವೂ ದೂರವಾಗುವುದು.
ಶೈಕ್ಷಣಿಕ ಅಭ್ಯಾಸಕ್ಕೆ ಸಾಧ್ಯತೆಗಳನ್ನು ಸರಿಯಾಗಿ ಬಳಸಿಕೊಂಡು, ಸ್ವಪ್ರಯತ್ನದಿಂದ ಸಾಧನೆ ಮಾಡಿಎಂದು ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿದಾಮ್ಲೆ ಮಾತನಾಡಿ ಈ ಶಾಲೆಯಲ್ಲಿ ಕಲಿತ ಭಾರತೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಸ್ನೇಹದ ಮೌಲ್ಯವನ್ನು ಪಸರಿಸುವ ಕೆಲಸ ಮಾಡಬೇಕು. ಜೀವನದಲ್ಲಿ ಉತ್ತಮ ಗುರಿಯೊಂದನ್ನು ಇಟ್ಟುಕೊಂಡು ಅದನ್ನು ತಲುಪಲು ಪ್ರಾಮಾಣಿಕ ಕೆಲಸ ಮಾಡಿ ಕಲಿಕೆಯ ಜೊತೆಗೆ ಸೃಜನಾತ್ಮಕ ಕಲೆಯನ್ನು ಬೆಳೆಸಿಕೊಂಡು ಉತ್ತಮ ನಾಗರೀಕರಾಗಿ ಬಾಳಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಿಕ್ಷಕರಾದ ಶ್ರೀ ರಘುರಾಮ ಭಟ್ ಸಿ, ಮೀನಾಕ್ಷಿ ಪಿ, ಪ್ರಸನ್ನ ಐವರ್ನಾಡು, ಜಯಲಕ್ಷ್ಮಿ, ಜಯಂತಿ ಕೆ, ಜಯಭಾರತಿ ಹೆಚ್, ವಸಂತಿ ಬಿ, ಚಂದ್ರಕಲಾಎ .ಬಿ, ದಿವ್ಯಾ ಕೆ, ಪವಿತ್ರ ಕೆ, ಹಾಗೂ ಸವಿತಾ.ಯಂ ಇವರು ಶುಭಹಾರೈಸಿದರು. ಕಿರಿಯ ವಿದ್ಯಾರ್ಥಿಗಳಾದ ಅನಘಾ ಆರ್.ಯು, ಲಾವಣ್ಯಜೆ.ಡಿ, ಕೌಶಿಕಾ ಜಿ, ಶ್ರೀಶ, ಕೃಷ್ಣ ಪಿ, ಚಂದನ್ಎಸ್, ಶ್ರೀಶ ಕೆ ಇವರು ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸಿದರು. ೧೦ನೇ ತರಗತಿ ವಿದ್ಯಾರ್ಥಿಗಳಾದ ಚರಣ್ ರಾಜ್ ಎನ್.ಎಮ್, ಮಯೂರ, ರಂಜಿತ್ ಕೆ.ವಿ, ಅನು ಡಿ, ಶ್ವೇತಾ ಎನ್. ಎನ್, ದಿಶಾ ಜೈನ್ ಹಾಗೂ ವೈಶಾಖ್ ಶಾಲೆಯ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ೯ನೇ ತರಗತಿಯ ವಿದ್ಯಾರ್ಥಿಗಳಾದ ಮುರಾರಿ ಅಭ್ಯಂಕರ್ ಸ್ವಾಗತಿಸಿ, ವಿಶ್ವಾಸ್ ಡಿ ವಂದಿಸಿದರು. ಶ್ರದ್ಧಾ ಡಿ.ಕೆ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.