ಬೆಳ್ತಂಗಡಿ : ತಾಲೂಕಿನ ವಾಲಿಬಾಲ್ ಆಟಗಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಬೆಳ್ತಂಗಡಿ ತಾಲೂಕು ವಾಲಿಬಾಲ್ ಅಶೋಷಿಯೇಷನ್ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ವಾಲಿಬಾಲ್ ಲೀಗ್ ಎಂಬ ಹೊಸ ಪ್ರಯೋಗವೊಂದನ್ನು ಎ. 19 ರಂದು ನಡೆಸಲಾಗುವುದು ಎಂದು ಅಸೋಸಿಯೇಶನ್ ತಾಲೂಕು ಅಧ್ಯಕ್ಷ, ಪತ್ರಕರ್ತ ಪುಷ್ಪರಾಜ ಶೆಟ್ಟಿ ತಿಳಿಸಿದರು. ಅವರು ಬುಧವಾರ ವಾರ್ತಾಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಲೀಗ್ನ ಬಗ್ಗೆ ಮಾಹಿತಿ ನೀಡಿದರು.
ತಾಲೂಕಿನ ಆಟಗಾರರಿಗೆ ಉತ್ತಮ ಅವಕಾಶ ಒದಗಿಸುವ ನಿಟ್ಟಿನಲ್ಲಿ ಐಪಿಎಲ್ ಮಾದರಿಯಲ್ಲಿ ಬೆಳ್ತಂಗಡಿ ತಾಲೂಕು ವಾಲಿಬಾಲ್ ಲೀಗ್ (ಬಿವಿಎಲ್) ಪಂದ್ಯಾಟವನ್ನು ಆಯೋಜಿಸಲಾಗಿದೆ. ಈ ಪಂದ್ಯಾಟ ಎಪ್ರಿಲ್ 19 ರಂದು ಲಾಯಿಲದ ಪ್ರಸನ್ನ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದರಲ್ಲಿ ತಾಲೂಕಿನ ಆಟಗಾರರಿಗೆ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದ್ದು 80 ಮಂದಿ ಆಟಗಾರರು ನೋಂದಾಯಿಸಿ ಭಾಗವಹಿಸುತ್ತಿದ್ದಾರೆ. ಅವರನ್ನು ಸೇರಿಸಿ 8 ತಂಡಗಳನ್ನು ರಚಿಸಲಾಗಿದ್ದು ಎಲ್ಲಾ ತಂಡಕ್ಕೂ ಪ್ರಯೋಜಕರಿದ್ದಾರೆ. ಚೀಟಿಎತ್ತುವ ಮೂಲಕ ಆಟಗಾರರನ್ನು ಹಂಚಿಕೆ ಮಾಡಲಾಗಿದೆ. ಮೊದಲ ಪಂದ್ಯಾಟವು ತಾಲೂಕು ವಾಲಿಬಾಲ್ ಆಶೋಷಿಯೇಷನ್ನ ನೇತೃತ್ವದಲ್ಲಿ ಪ್ರಸನ್ನಎಜುಕೇಷನ್ ಟ್ರಸ್ಟ್ ಲಾಲ ಇದರ ಸಹಯೋಗದೊಂದಿಗೆ ನಡೆಯುತ್ತಿದೆ ಮುಂದೆ ತಾಲೂಕಿನಲ್ಲಿ ಇದೇ ಮಾದರಿಯ ಪಂದ್ಯಾಟಗಳನ್ನು ಆಯೋಜಿಸಲು ಅವಕಾಶವಿದ್ದು ತಂಡಗಳು ಲಭ್ಯವಿರುತ್ತವೆ ಎಂದರು.
ವಿಜಯ ಫೆರ್ನಾಂಡಿಸ್ ಪ್ರಾಯೋಜಕತ್ವದ ವರುಣ್ಟ್ರಾವೆಲ್ಸ್ ಬೆಳ್ತಂಗಡಿ, ರಂಜನ್ ಜಿ. ಗೌಡ ಪ್ರಾಯೊಜಕತ್ವದ ಶಿರ್ಡಿಸಾಯಿ, ನಾಗಭೂಷಣ ಮೇಲಾಂಟ ಪ್ರಾಯೋಜಕತ್ವದ ಪದ್ಮುಂಜ ಸ್ಪೈಕರ್ಸ್, ರಾಜಶೇಖರ್ ಬಿ. ಶೆಟ್ಟಿ ಪ್ರಾಯೋಜಕತ್ವದ ಕಿಂಗ್ಸ್ ಮಡಂತ್ಯಾರು, ಅಭಿನಂದನ್ ಹರೀಶ್ ಕುಮಾರ್ ವಿಶ್ವನಾಥ ಕೊಲ್ಲಾಜೆ ಪ್ರಾಯೋಜಕತ್ವದ ಕೋಟಿಚೆನ್ನಯ್ಯ, ನಾಮದೇವರಾವ್ ಮತ್ತುರಾಜೇಶ್ ಪ್ರಾಯೋಜಕತ್ವದ ಯಂಗ್ಚಾಲೆಂಜರ್ಸ್ ಆಂಡ್ ತ್ರಿಶೂಲ್ ಎಲೆಕ್ಟ್ರಾನಿಕ್ಸ್, ಪ್ರದೀಪ್ ಮತ್ತು ರಾಮಪ್ರಸಾದ್ ಪ್ರಾಯೋಜಕತ್ವದ ಜೈಭಜರಂಗಿ ಮರೋಡಿ, ರಾಜೇಶ್, ಜೋನ್ಸನ್ ಮತ್ತುರೋಬಿನ್ ಪ್ರಾಯೋಜಕತ್ವದ ಎಸ್.ಜೆ. ಫ್ರೆಂಡ್ಸ್ ಧರ್ಮಸ್ಥಳ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿವೆ ಎಂದರು.
ಪಂದ್ಯಾಟದ ಉದ್ಘಾಟನೆಯನ್ನು ಮಾಜಿ ಯುವಜನ ಕ್ರೀಡಾ ಸಚಿವ ಕೆ.ಗಂಗಾಧರಗೌಡ ಅವರು ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ರಂಜನ್ ಜಿ. ಗೌಡರವರು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ವಾಲಿಬಾಲ್ ಆಶೋಷಿಯೇಷನ್ ಅಧ್ಯಕ್ಷ ಸುರೇಶ್ ಬಾಬು, ತಾಲೂಕು ಅಧ್ಯಕ್ಷ ಪುಷ್ಪರಾಜಶೆಟ್ಟಿ, ಲಾಯಿಲಾ ಜಿ. ಪಂ.ಅಧ್ಯಕ್ಷ ಸೌಮ್ಯಲತಾ, ತಾ.ಪಂ.ಸದಸ್ಯ ಸುಧಾಕರ್, ಲಾಯಿಲಾ ಗ್ರಾ.ಪಂ.ಉಪಾಧ್ಯಕ್ಷ ಗಿರೀಶ್ ಡೋಂಗ್ರೆ, ನ್ಯಾಯವಾದಿ ದಿನೇಶ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ವಾಲಿಬಾಲ್ ಅಶೋಷಿಯೇಷನ್ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ರಂಜನ್ ಜಿ. ಗೌಡ, ಭರತ್ಕುಮಾರ್, ಅಭಿನಂದನ್ ಹರೀಶ್, ನಾಮದೇವರಾವ್, ವಿಜಯಫೆರ್ನಾಂಡಿಸ್, ರಾಜಶೇಖರ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಅಸೋಸಿಯೇಶನ್ ಕಾರ್ಯಾಧ್ಯಕ್ಷ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ರಂಜನ್ಜಿ.ಗೌಡ, ಕಾರ್ಯದರ್ಶಿ ಗುರುಪ್ರಕಾಶ್, ಕೋಶಾಧಿಕಾರಿ ಪತ್ರಕರ್ತ ಶಿಬಿ ಧರ್ಮಸ್ಥಳ ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.