ಬೆಂಗಳೂರು: 2012 ಮಾರ್ಚ 12 ರಂದು ವಕ್ಫ್ ಮಂಡಳಿಗೆ ಸಂಬಂಧಿಸಿದ ಆಸ್ತಿ ಕಬಳಿಕೆ ವರದಿಯನ್ನು ಅಂದಿನ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಸರಕಾರಕ್ಕೆ ಸಲ್ಲಿಸಿದ್ದು ಅದನ್ನು ಸದನದಲ್ಲಿ ಮಂಡಿಸಿಲ್ಲದ ಬಗ್ಗೆ ಹೈಕೋರ್ಟ್ ಸರಕಾರದ ಮುಖ್ಯಕಾರ್ಯದರ್ಶಿಗೆ ನೋಟೀಸ್ ಜಾರಿಮಾಡಲಾಗಿದೆ.
ಈ ಹಿಂದೆ ವಕ್ಫ್ ಮಂಡಳಿಗೆ ಸಂಬಂಧಿಸಿದ ಆಸ್ತಿಕಬಳಿಕೆ ವರದಿಯನ್ನು ಅನ್ವರ್ ಮಾಣಿಪ್ಪಾಡಿಯವರು ನೀಡಿದ್ದು, ಈ ಬಗ್ಗೆ ಈ ತನಕ ಸರಕಾರ ಸದನದಲ್ಲಿ ವರದಿ ಮಂಡಿಸಿಲ್ಲ ಎಂದು ದೂರಿ ಮಾಜಿ ಸಚಿವ ಕಾಂತಾ ಅವರು ಈ ಹಿಂದೆ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ಸಂದರ್ಭ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಜಿ.ಶಿವಣ್ಣರವರು, ಫೆಬ್ರವರಿ ಅಧಿವೇಶನದಲ್ಲಿ ವರಿದಿ ಮಂಡಿಸಲಾಗುವುದು ಎಂದು ಹೈಕೋರ್ಟ್ಗೆ ತಿಳಿಸಲಾಗಿತ್ತು.
ಆದರೆ ಫೆಬ್ರವರಿ ಅಧಿವೇಶನದಲ್ಲಿ ವರಿದಿ ಮಂಡಿಸಿಲ್ಲವೆಂದು ದೂರಿ ಕಾಂತಾ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ಸರಕಾರದ ಮುಖ್ಯಕಾರ್ಯದರ್ಶಿಗೆ ನೋಟೀಸ್ ಜಾರಿಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.