ನವದೆಹಲಿ: ಪುಟ್ಬಾಲ್ ಜಗತ್ತಿನ ದಂತಕಥೆ ಪಿಲೆ ತಾನು ಗಳಿಸಿದ ಮೆಡಲ್, ಟ್ರೋಫಿ, ಗೋಲ್ ಕ್ರೌನ್ಗಳನ್ನು ಹರಾಜು ಹಾಕಲು ನಿರ್ಧರಿಸಿದ್ದಾರೆ.
ಮೂರು ಗೋಲ್ಡ್ ಮೆಡಲ್, 1000 ಗೋಲ್ ಕ್ರೌನ್ಗಳನ್ನು ಸೇರಿಸಿ ಪಿಲೆ ಬಳಿ ಒಟ್ಟು 2000ವಸ್ತುಗಳಿವೆ. ಇವೆಲ್ಲವನ್ನು ಅವರು ತಮ್ಮ ಅಭಿಮಾನಿಗಳಿಗೆ, ಸಂಗ್ರಹಕರಿಗೆ ಹರಾಜು ಹಾಕಲು ನಿರ್ಧರಿಸಿದ್ದಾರೆ.
ಸ್ವತಃ ಪಿಲೆ ಅವರೇ ಈ ವಿಷಯವನ್ನು ಘೋಷಿಸಿದ್ದು, ನನ್ನ ಅಭಿಮಾನಿಗಳು, ಸಂಗ್ರಹಕರು ಕೂಡ ನನ್ನ ಇತಿಹಾಸದ ಒಂದು ಭಾಗವನ್ನು ಹೊಂದಲಿ ಎಂಬ ಕಾರಣಕ್ಕೆ ಹರಾಜು ಹಾಕುತ್ತಿದ್ದೇನೆ. ಅವರು ಈ ವಸ್ತುಗಳನ್ನು ಸುಭದ್ರವಾಗಿಡುತ್ತಾರೆ ಮತ್ತು ನನ್ನ ಕಥೆಯನ್ನು ತಮ್ಮ ಮಕ್ಕಳು ಮತ್ತು ಮರಿ ಮಕ್ಕಳಿಗೆ ಹೇಳುತ್ತಾರೆ ಎಂಬ ಭರವಸೆ ನನಗಿದೆ ಎಂದಿದ್ದಾರೆ.
ಜೂನ್ 7-9ರವರೆಗೆ ಲಂಡನ್ನಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಜೂಲಿಯನ್ಸ್ ಆಕ್ಶನ್ಸ್ ಹರಾಜು ಪ್ರಕ್ರಿಯೆಯನ್ನು ನಡೆಸಲಿದೆ. ಇದರಿಂದ ಬಂದ ಹಣದ ಸ್ವಲ್ಪ ಭಾಗವನ್ನು ಆಸ್ಪತ್ರೆಗೆ ದಾನ ಮಾಡಿ, ಸ್ವಲ್ಪ ಭಾಗವನ್ನು ಪಿಲೆ ಬಂಧುಮಿತ್ರರಿಗೆ ನೀಡಲಿದ್ದಾರೆ ಎನ್ನಲಾಗಿದೆ.
ಪಿಲೆ ಅವರು 1958, 1962,1970ರಲ್ಲಿ ಬ್ರೆಝಿಲ್ ವಿಶ್ವಕಪ್ ಗೆದ್ದಾಗ ಆ ತಂಡದಲ್ಲಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.