ಇಸ್ಲಾಮಾಬಾದ್: ಚೀನಾ ಮತ್ತು ಪಾಕಿಸ್ಥಾನ ಸೇರಿಕೊಂಡು ಭಾರತದ ಪ್ರಗತಿಗೆ ಅಡ್ಡಗಾಲು ಹಾಕುತ್ತಿವೆ ಎಂಬ ಅಂಶ ಮತ್ತೊಮ್ಮೆ ಸಾಬೀತಾಗಿದೆ.
ಭಾರತ ಪರಮಾಣು ಪೂರೈಕೆದಾರ ರಾಷ್ಟ್ರಗಳ ಗುಂಪಿ(ಎನ್ಎಸ್ಜಿ)ನ ಸದಸ್ಯತ್ವ ಪಡೆಯದಂತೆ ತಡೆಯುವ ಸಲುವಾಗಿ ಚೀನಾಗೆ ನಾವು ಸಹಾಯ ಮಾಡಿದ್ದೇವೆ ಎಂದು ಪಾಕ್ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ಸರ್ತಾಝ್ ಅಜೀಝ್ ಹೇಳಿದ್ದಾರೆ.
ಎನ್ಎಸ್ಜಿ 48 ಸದಸ್ಯ ರಾಷ್ಟ್ರಗಳನ್ನು ಹೊಂದಿದೆ, ಈ ಗುಂಪಿಗೆ ಸೇರಲು ಭಾರತ ಕೂಡ ಪ್ರಯತ್ನ ನಡೆಸುತ್ತಿದೆ. ಆದರೆ ಚೀನಾ ಭಾರತ ಸದಸ್ಯತ್ವ ಪಡೆಯದಂತೆ ಅಡ್ಡಿಪಡಿಸುತ್ತಿದೆ. ಈ ವಿಷಯದಲ್ಲಿ ಚೀನಾಗೆ ಪಾಕಿಸ್ಥಾನ ಕೂಡ ಸಹಾಯ ಮಾಡುತ್ತಿದೆ ಎಂದು ಸರ್ತಾಝ್ ಹೇಳಿಕೊಂಡಿದ್ದಾರೆ.
ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಭಾರತಕ್ಕೆ ಬೆಂಬಲ ಸೂಚಿಸಿದೆ. ಆದರೆ ಚೀನಾ ಅಡ್ಡಿಯುಂಟು ಮಾಡುತ್ತಿದೆ. ಒಂದು ವೇಳೆ ಭಾರತ ಸದಸ್ಯತ್ವ ಪಡೆದರೆ ಪಾಕ್ಗೂ ಸದಸ್ಯತ್ವ ದೊರಕಿಸಿಕೊಡಲು ನಾನು ಸಹಾಯ ಮಾಡುವುದಾಗಿ ಚೀನಾ ಭರಸವೆ ನೀಡಿದ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.