ಲಂಡನ್: ಬ್ರಿಟಿಷ್ ಸರ್ಕಾರವು ಮಾ.18ರಿಂದ ವಿವಿಧ ವಿಭಾಗಗಳ ವೀಸಾ ಶುಲ್ಕವನ್ನು ಹೆಚ್ಚಿಸಲು ನಿರ್ಧರಿಸಿದೆ. ಕಳೆದ ಒಂದು ವರ್ಷದಿಂದ ಭಾರತದ ನುರಿತ ಉದ್ಯಮಿಗಳು, ನೌಕಕರು ಹೆಚ್ಚಿನ ಸಂಖ್ಯೆಯಲ್ಲಿ ವೀಸಾ ಪಡೆದಿದ್ದು, ಸಾವಿರಾರು ಭಾರತೀಯರ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ.
ಜನವರಿ ತಿಂಗಳಿನಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಅಲ್ಪಾವಧಿ ಭೇಟಿ, ಉದ್ಯೋಗ ಅಥವಾ ಅಲ್ಪಾವಧಿ ಶಿಕ್ಷಣ ವೀಸಾಗಳ ಮೇಲೆ ಶೇ.2ರಷ್ಟು ಶುಲ್ಕ ಹೆಚ್ಚಿಸಲಿದೆ. ಅದಲ್ಲದೇ ರಾಷ್ಟ್ರೀಯತೆ ಮತ್ತು ವಸಾಹತು ಅರ್ಜಿಗಳ ವೀಸಾಗಳ ಮೇಲೆ ಶೇ.25ರಷ್ಟು ಶುಲ್ಕ ಹೆಚ್ಚಿಸಲು ಬ್ರಿಟಿಷ್ ಸರ್ಕಾರ ನಿರ್ಧರಿಸಿದೆ.
ವೀಸಾ ಶುಲ್ಕ ಹೆಚ್ಚಳದಿಂದ ಗಡಿ, ವಲಸೆ ಮತ್ತು ಪೌರತ್ವ ವ್ಯವಸ್ಥೆಯ ಕಡೆಗೆ ಯುಕೆ ತೆರಿಗೆದಾರರ ಶ್ರಮವನ್ನು ಕಡಿಮೆಗೊಳಿಸುತ್ತದೆ. ಇದರಿಂದ ಸ್ವ-ಬಂಡವಾಳ ವ್ಯವಸ್ಥೆಯನ್ನು ಒದಗಿಸಬಹುದು ಎಂದು ಯುಕೆ ಗೃಹ ಕಚೇರಿ ತಿಳಿಸಿದೆ.
೨೦೧೫ರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ 92,062 ಭಾರತೀಯರು ವೀಸಾ ಪಡೆದಿದ್ದಾರೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.