ನವದೆಹಲಿ: ಭಾರತ ಹಾಗೂ ಅಮೇರಿಕ ನಡುವಿನ ವಾಣಿಜ್ಯ, ವ್ಯಾಪಾರ ವಿಚಾರದಲ್ಲಿ ಬಿರಿಕು ಮೂಡಿದ್ದು, ಅಮೇರಿಕದಲ್ಲಿರುವ ವಲಸಿಗರಲ್ಲದ ಭಾರತೀಯರ ತಾತ್ಕಾಲಿಕ ಉದ್ಯೋಗ ವೀಸಾಗಳ ಶುಲ್ಕ ಹೆಚ್ಚಳದ ವಿರುದ್ಧ ಭಾರತ ವಿಶ್ವ ಸಂಸ್ಥೆಗೆ ದೂರು ಸಲ್ಲಿಸಿದೆ.
ಭಾರತವು ವಿವಾದಾತ್ಮಕ H-1B ಮತ್ತು L-1 ಉದ್ಯೋಗ ವೀಸಾಗಳ ಮಿತಿ ಹಾಗೂ ಅದರ ಶುಲ್ಕ ದ್ವಿಗುಣಗೊಳಿಸಿರುವುದರ ಬಗ್ಗೆ ದೂರು ಸಲ್ಲಿಸಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಈ ವೀಸಾಗಳನ್ನು ಸಾಮಾನ್ಯವಾಗಿ ಅಮೇರಿಕದ ಮಾಹಿತಿ ತಂತ್ರಜ್ಞಾನ ಸೇವಾ ಸಂಸ್ಥೆಗಳಲ್ಲಿ ನೇಮಕಗೊಂಡ ಸಾವಿರಾರು ಭಾರತೀಯರಿಂದ ಬಳಸಲಾಗುತ್ತಿದೆ.
ಭಾರತದ ಸೌರ ವಿದ್ಯುತ್ ಸಬ್ಸಿಡಿ ಯೋಜನೆಯ ಸ್ವದೇಶಿ ನಿಯಮಗಳ ವಿರುದ್ಧ ಅಮೇರಿಕ ವಿಶ್ವಸಂಸ್ಥೆ ಆಡಳಿತವನ್ನು ತನ್ನ ಪರವಾಗಿ ವಹಿಸಿಕೊಂಡದ್ದು, ಅಮೇರಿಕದ ಹೊಸ ವೀಸಾ ನಿಯಮಗಳಲ್ಲಿ ವಿಶ್ವ ಸಂಸ್ಥೆಯ ಬದ್ಧತೆಯ ವಿರುದ್ಧ ಅಮೇರಿಕ ನಡೆಯುತ್ತಿದೆ ಎಂದು ಭಾರತ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.