ಬೆಳ್ತಂಗಡಿ : ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಂಡಿಸಿದ 2016-17 ಸಾಲಿನ ಬಜೆಟ್ ಈ ದೇಶದ ಗ್ರಾಮೀಣಾಭಿವೃದ್ಧಿ ಹಾಗೂ ಕೃಷಿ ವಲಯದಲ್ಲಿ ಹೊಸ ಸಂಚಲನ ಮೂಡಿಸಲಿದೆಯೆಂದು ಬೆಳ್ತಂಗಡಿ ಬಿಜೆಪಿ ಮೆಚ್ಚುಗೆ ವ್ಯಕ್ತ ಪಡಿಸಿದೆ.
ಶ್ರೀ ಸಾಮಾನ್ಯರಿಗೆ ಯಾವುದೇ ಹೊರೆಯಾಗದಂತೆ ಜಾಗೃತೆ ವಹಿಸಿದ ಈ ಮುಂಗಡ ಪತ್ರದಿಂದ ಮುಂದಿನ ದಿನಗಳಲ್ಲಿ ಸಾಮಾಜಿಕವಾಗಿ ಜನಜೀವನ ಮಟ್ಟ ಉತ್ತಮವಾಗಲಿದ್ದು, ನಾಡಿನ ಜನತೆ ಉತ್ತಮ ರಸ್ತೆ ಹಾಗೂ ಗ್ರಾಮ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಹೊಂದಲಿದ್ದು ಉದ್ಯೋಗ ಸೃಷ್ಟಿಯಾಗಲಿವೆ. ಸಾವಯವ ಕೃಷಿ ಅಂತರ್ಜಲ ಅಭಿವೃದ್ಧಿಯೂ ಸೇರಿದಂತೆ ನೀರಾವರಿಗೆ ಹೆಚ್ಚು ಒತ್ತು ನೀಡಿರುವ ಕೇಂದ್ರ ವಿತ್ತ ಸಚಿವರು ಹಿರಿಯ ನಾಗರಿಕರು ಸೇರಿದಂತೆ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಡಯಾಲಿಸ್ ವೆಚ್ಚದ ವಿನಾಯಿತಿ ನೀಡುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡುವ ದಿಟ್ಟತನ ತೋರಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂಬ ಮಾತನ್ನು ಮೋದಿ ಸರ್ಕಾರ ಉಳಿಸಿಕೊಂಡಿದೆ.
ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಫಲಿತಾಂಶ ತೃಪ್ತಿ ತಂದಿದೆ: ರಾಜ್ಯ ಕಾಂಗ್ರೇಸ್ ಆಡಳಿತವಿದ್ದಾಗ್ಯೂ ತಾಲೂಕಿನಲ್ಲಿ ಆಡಳಿತ ಪಕ್ಷದ ಶಾಸಕರಿದ್ದರೂ ಬೆಳ್ತಂಗಡಿಯಲ್ಲಿ ಭಾರತೀಯ ಜನತಾ ಪಾರ್ಟಿ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ತಾಲೂಕಿನಲ್ಲಿ ಮತಗಳಿಕೆಯಲ್ಲಿ ಕಾಂಗ್ರೇಸ್ಗಿಂತ ಮುಂದಿದೆ.ಜಿಪಂ ಹಾಗೂ ತಾಪಂನಲ್ಲಿ ಬಿಜೆಪಿ ಅನುಕ್ರಮವಾಗಿ ಸಿಂಧುವಾದ ಮತಗಳ ಪೈಕಿ ಶೇ. 48.82 ಹಾಗೂ ಶೇ. 47.0 ಮತಗಳನ್ನು ಪಡೆದು ಗಣನೀಯ ಸಾಧನೆ ತೋರಿದೆ.
ಕ್ಷೇತ್ರಗಳ ಪುನರ್ ವಿಂಗಡಣೆ ಹಿನ್ನಲೆಯಲ್ಲಿ ಕಣಿಯೂರು, ಉಜಿರೆ, ನಾರಾವಿ ಜಿಪಂಗಳಲ್ಲಿ ಅಲ್ಪ ಪ್ರಮಾಣದ ಮತಗಳ ಅಂತರದಲ್ಲಿ ಸೋತಿದ್ದು, ಮಿತ್ತಬಾಗಿಲು ಹಾಗೂ ಕುವೆಟ್ಟು ತಾ.ಪಂ ಕೇತ್ರಗಳನ್ನು ಕೂದಳೆಯ ಅಂತರದಲ್ಲಿ ಕಳಕೊಂಡದ್ದು ನೋವಿನ ಸಂಗತಿಯಾಗಿದೆ. ತಾಲೂಕಿನ ಮತದಾರರ ಭಾವನೆಗಳಿಗೆ ಚ್ಯುತಿ ಬಾರದ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಜನಪರ ಕಾರ್ಯಕ್ರಮಗಳನ್ನು ಬಿಜೆಪಿ ರೂಪಿಸಿಲಿದ್ದು ಈ ಚುನಾವಣಾ ಪರ್ವದ ಯಶಸ್ಸಿಗೆ ಕಾರಣೀಕರ್ತರಾದವರಿಗೆ ಅಭಿನಂದನೆಗಳು ಎಂದು ಬೆಳ್ತಂಗಡಿ ಮಂಡಲ ಬಿಜೆಪಿ ಅಧ್ಯಕ್ಷ ವಿ.ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.