ವಾಷಿಂಗ್ಟನ್: ಯಾವುದೇ ಕಾರಣಕ್ಕೂ ತನ್ನ ಪರಮಾಣು ಸಾಮರ್ಥ್ಯದ ಬಲವರ್ಧನೆಯ ಕಾರ್ಯವನ್ನು ಸ್ಥಗಿತಗೊಳಿಸುವುದಿಲ್ಲ ಎಂದು ಪಾಕಿಸ್ಥಾನ ಬುಧವಾರ ಸ್ಪಷ್ಟಪಡಿಸಿದೆ.
ಪಾಕಿಸ್ಥಾನ ತನ್ನ ಪರಮಾಣು ನಿಯಮಗಳನ್ನು ವಿಮರ್ಶೆಗೊಳಪಡಿಸಬೇಕು, ಪರಮಾಣು ಅಸ್ತ್ರಗಳನ್ನು ಹೆಚ್ಚಿಸುವುದನ್ನು ಸ್ಥಗಿತಗೊಳಿಸಬೇಕು ಅಮೆರಿಕಾದ ಕಾರ್ಯದರ್ಶಿ ಜಾನ್ ಕೆರ್ರಿ ಅವರು ಸಲಹೆ ನೀಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ಥಾನದ ವಿದೇಶಾಂಗ ಸಲಹೆಗಾರ ಸತ್ರಾಝ್ ಅಜೀಝ್, ಪರಮಾಣು ವಿಷಯ ಅಮೆರಿಕಾ ಮತ್ತು ಪಾಕಿಸ್ಥಾನದ ನಡುವೆ ಭಿನ್ನಾಭಿಯವಿರುವ ವಲಯ ಎಂದಿದ್ದಾರೆ.
ಅಲ್ಲದೇ ಪರಮಾಣು ಸಾಮರ್ಥ್ಯವನ್ನು ಹೆಚ್ಚಿಸುವ ಕಾರ್ಯವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದಿದ್ದಾರೆ.
ಪಾಕಿಸ್ಥಾನ ಪರಮಾಣು ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ ವಿಶ್ವದ ಪ್ರಮುಖ ರಾಷ್ಟ್ರವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.