ಕಾಸರಗೋಡು : ದೇಶದಲ್ಲಿ ಜನಸಂಖ್ಯೆಯ ಅಸಮಾನತೆಯಿಂದ ಹಿಂದೂಗಳು ಅಲ್ಪಸಂಖ್ಯಾತರಾಗುವ ಭೀತಿ ಎದುರಾಗಿದೆ. ಮತ-ಪಂಥಗಳ ನಡುವಿನ ಅಸಮತೋಲನ ಇದೇ ರೀತಿ ಮುಂದುವರಿದರೆ 2061 ರಲ್ಲಿ ಹಿಂದೂಗಳು ಭಾರತದಲ್ಲಿ ಅಲ್ಪಸಂಖ್ಯಾತರಾಗುವ ಸಾಧ್ಯತೆಗಳಿವೆ ಎಂದು ಫೋರಮ್ ಫೋರ್ ಇಂಟಿಗ್ರೇಟೆಡ್ ನ್ಯಾಷನಲ್ ಸೆಕ್ಯುರಿಟಿ (FINS) ಇದರ ರಾಷ್ಟ್ರೀಯ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ಉಚ್ಛ ನ್ಯಾಯಾಲಯದ ವಕೀಲರೂ ಆದ ಶ್ರೀ ವಿ.ಎಸ್ ಹೆಗಡೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಸರಗೋಡಿನಲ್ಲಿ ರಾಷ್ಟ್ರೀಯ ಚಿಂತಕ2011 ಮತ್ತು ಸಾಮಾಜಿಕ ಪರಿಣಾಮಗಳು ಎಂಬ ವಿಷಯದ ಕುರಿತಾಗಿ ಮಾತನಾಡಿದ ಅವರು 50 ವರ್ಷಗಳಲ್ಲಿ ಜನಸಂಖ್ಯೆ ಸಾಕಷ್ಟು ಏರಿಕೆಯಾಗಿದೆ. ಜನಸಂಖ್ಯೆ ಏರಿಕೆಗನುಗುಣವಾಗಿ ಮತ-ಪಂಥಗಳ ಸಂಖ್ಯೆಯಲ್ಲಿಯೂ ಅಪಾರ ಪ್ರಮಾಣದ ಬದಲಾವಣೆಯಾಗಿದೆ.
ಭಾರತೀಯ ಮೂಲದವರ ಮತ-ಪಂಥ ಅನುಯಾಯಿಗಳ ಪ್ರಮಾಣ ಮೊದಲು ಶೇ. 88 ರಷ್ಟಿತ್ತು. ಇದು ಶೇ. 83.8 ಕ್ಕೆ ಇಳಿಕೆಯಾಗಿದೆ. ಆದರೆ ಶೇ.9.8 ರಷ್ಟಿದ್ದ ಮುಸಲ್ಮಾನರ ಜನಸಂಖ್ಯೆ ಶೇ.14.23 ಕ್ಕೆ ಏರಿದೆ ಎಂದು ಅಂಕಿ ಅಂಶಗಳ ದಾಖಲೆಗಳನ್ನು ವಿವರಿಸಿದರು. ಈಶಾನ್ಯ ರಾಜ್ಯಗಳಾದ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರಗಳ ಗಡಿ ಜಿಲ್ಲೆಗಳಲ್ಲಿ ಮುಸಲ್ಮಾನರು ಹೆಚ್ಚಿದ್ದಾರೆ. ಬಾಂಗ್ಲಾ ದೇಶದಿಂದ ನಿರಂತರ ಒಳನುಸುಳುವಿಕೆಯಿಂದಲೂ ಮುಸಲ್ಮಾನರ ಸಂಖ್ಯೆ ಏರಿಕೆ ಕಂಡಿದೆ.
ಅರುಣಾಚಲದಲ್ಲಿ ಕ್ರಿಶ್ಚಿಯನ್ ಸಮುದಾಯ ಜನಸಂಖ್ಯೆ ಹತ್ತು ವರ್ಷಗಳಲ್ಲಿ ಶೇ. 13೩ ರಷ್ಟು ಏರಿಕೆಯಾಗಿದೆ’ ಎಂದು ವಿವರಿಸಿದರು.ಜಾಗತಿಕವಾಗಿ ಮುಸಲ್ಮಾನ ಮಹಿಳೆಯರು ಮಕ್ಕಳನ್ನು ಹೆರುವ ಸಂಖ್ಯೆ ಹೆಚ್ಚು. ಈ ಸರಾಸರಿ ಮುಸ್ಲಿಂ ಮಹಿಳೆಯರಲ್ಲಿ 3.1, ಕ್ರೈಸ್ತರದ್ದು 2.7, ಹಿಂದುಗಳದ್ದು 2.1 ಆಗಿದೆ. 6 ವರ್ಷದೊಳಗಿನ ಮಕ್ಕಳ ಪ್ರಮಾಣದಲ್ಲೂ ಮುಸಲ್ಮಾನರದೇ ಮೇಲುಗೈ.
ಕೇರಳದಲ್ಲಿ ಹಿಂದುಗಳ ಜನಸಂಖ್ಯೆ 54.73% ಆಗಿದೆ.ಅದೇ ರೀತಿ ಕಾಸರಗೋಡು ಜಿಲ್ಲೆಯಲ್ಲಿ ಹಿಂದು ಜನಸಂಖ್ಯೆ 55.84 ತಲುಪಿದ್ದು ಇನ್ನುಳಿದ ಜಿಲ್ಲೆಗಳಾದ ಮಲಪ್ಪುರಂ, ಎರ್ನಾಕುಲಂ, ಇಡುಕ್ಕಿ ಮೊದಲಾದ ಜಿಲ್ಲೆಗಳಲ್ಲೂ ಹಿಂದುಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಹಾಗಾಗಿ ಭಾರತೀಯ ಮೂಲದವರ ಮತ-ಪಂಥ ಅನುಯಾಯಿಗಳ ಜನಸಂಖ್ಯೆಯ ಅಸಮಾನತೆಯನ್ನು ಹೋಗಲಾಡಿಸಬೇಕೆಂದಲ್ಲಿ ವ್ಯಾಪಕ ಜನಜಾಗೃತಿ ಅಗತ್ಯ.ಅದೇ ರೀತಿ ಸಮಾನ ನಾಗರಿಕ ಹಕ್ಕುಜಾರಿಯಾಗಬೇಕು. ಹಾಗಾಗಿ ಈ ರೀತಿಯ ಕಾನೂನುಗಳನ್ನು ಜಾರಿ ಮಾಡುವ ಸಾಧ್ಯತೆಗಳ ಬಗ್ಗೆ ಎಲ್ಲರೂ ಯೋಚಿಸಬೇಕಾಗಿದೆ ಎಂಬುದಾಗಿ ಅವರು ಅಭಿಪ್ರಾಯಪಟ್ಟರು.
ಚಿಂತನ ಗೋಷ್ಟಿಯ ಕೊನೆಯಲ್ಲಿ ಪುನರ್ವವ ಚಿಂತಕರ ವೇದಿಕೆಯ ಪ್ರಧಾನ ಸಂಚಾಲಕರಾದ ಡಾ.ಸುರೇಶ್ ಅವರು ಮಾತನಾಡುತ್ತಾ ಸಾಮಾಜಿಕ ಹಾಗೂ ರಾಷ್ಟೀಯ ವಿಚಾರಗಳ ಕುರಿತಾಗಿ ಸಂವಾದ, ವಿಚಾರಗೋಷ್ಠಿಗಳ ಮೂಲಕ ಜನ ಜಾಗೃತಿ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಚಿಂತಕರ ವೇದಿಕೆ ಪುನರ್ನವ ಆರಂಭವಾಗಿದೆ.ಮುಂದಿನ ದಿನಗಳಲ್ಲೂ ಆಯಾ ಸಂದರ್ಭಕ್ಕೆ ಅನುಸಾರವಾಗಿ ಇದೇ ರೀತಿಯ ಸದ್ಭಾವನ ಗೋಷ್ಠಿಯಗಳನ್ನು ಏರ್ಪಡಿಸಲಾಗುವುದು ಎಂಬುದಾಗಿ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.