Monday, February 22nd, 2016
News13
ಬಂಟ್ವಾಳ : ಮಾನಸಿಕ ಶಾಂತಿ ಮಾನವನಿಗೆ ಅತಿ ಮುಖ್ಯವಾದುದು ಅದನ್ನು ದೇವಾಲಯ ಮತ್ತು ದೈವ ಸ್ಥಾನ ಗಳಲ್ಲಿ ಮಾತ್ರ ಪಡೆಯಲು ಸಾದ್ಯ ಜೀವನದಲ್ಲಿ ನೆಮ್ಮದಿಯ ಅನುಭವವಾದಾಗ ಶುದ್ಧವಾದ ನಗು ಹೊರಬರುತ್ತದೆ ನಂಜನ್ನು ಉಂಡಿರುವ ನಂಜುಂಡೆಶ್ವರ ನಂತೆ ಕೆಟ್ಟದ್ದನ್ನು ಉಂಡು ಉತ್ತಮ ವಾದುದ್ದನ್ನು ಸಮಾಜಕ್ಕೆ ಕೊಡಬೇಕು.
ಅಶಾಂತಿ ಎಂಬ ಕಾಯಿಲೆ ಯನ್ನು ದೂರ ಮಾಡಿ ಸುಸ್ಥಿರ ಸಮಮಾಜ ಕಟ್ಟಲು ನಾವು ಮುಂದಾಗ ಬೇಕು ಮನಸು ಮತ್ತು ಮಾತು ಒಂದಾಗಿದ್ದರೆ ಜೀವನ ಸುಂದರ ವಾಗಿರುತ್ತದೆ ಭಗವಂತ ನಲ್ಲಿ ಶ್ರದ್ದೆ ಇಟ್ಟಾಗ ಇವೆಲ್ಲವನ್ನು ಪಡೆಯಲು ಸಾದ್ಯ ಎಂದು ಅದಮಾರು ಮಠದ ಶ್ರೀ ಶ್ರೀ ವಿಶ್ವಪ್ರೀಯ ತೀರ್ಥ ಶ್ರೀಪಾದಂಗಳವರು ಹೇಳಿದರು. ಅವರು ಅರ್ಕುಳ ಸ್ವಯಂಭೂ ಶ್ರೀ ವರದೇಶ್ವರ ಸನ್ನಿದಿ ಯಲ್ಲಿ ನಡೆದ ಬ್ರಹ್ಮ ಕಲಶಾಭಿಷೇಕ ಸಂದರ್ಭ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡುತಿದ್ದರು ಮುಖ್ಯ ಅತಿಥಿ ಗಳಾಗಿ ಸದಾನಂದ ಆಳ್ವ ಅರ್ಕುಳ ಕಂಪ , ಸುಂದರ ಶೆಟ್ಟಿ ಕಲ್ಲ ತಡಮೆ , ಪೊಳಲಿ ಕೃಷ್ಣ ತಂತ್ರಿ ದಂಪತಿ ಗಳು , ಪೊಳಲಿ ಸುಬ್ರಮಣ್ಯ ತಂತ್ರಿ ಗಳು ಉಪಸ್ಥಿತರಿದ್ದರು.
ಸಂಸದ ನಳಿನ್ ಕುಮಾರ್ ಕಟೀಲು , ಒಡಿಯೂರಿನ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ , ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದರು. ಪ್ರಾತಕಾಲ ಪರಿಕಲಶ ಸಹಿತ ವರದೆಶ್ವರನಿಗೆ ಮತ್ತು ಮಹಾ ಗಣಪತಿ ದೇವರಿಗೆ ಬ್ರಹ್ಮ ಕಲಶಾಭಿಷೇಕ ನಡೆಯಿತು. ಸುರೇಶ ಕೆದಿಲಾಯ ಮತ್ತು ರಂಜಿತ್ ಕುಮಾರ್ ಕಲ್ಲೂರಾಯ ವೇದ ಮಂತ್ರ ಪಠಣ ಮಾಡಿದರು. ತೇವು ತಾರಾನಾಥ ಕೊಟ್ಟಾರಿ ಸ್ವಾಗತಿಸಿ ರಾಮಚಂದ್ರ ರಾವ್ ನಿರೂಪಿಸಿದರು , ಸುರೇಶ ಶೆಟ್ಟಿ ಬರ್ಕೆ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.