ಡಮಾಸ್ಕಸ್: ಅಲೆಪ್ಪೋದಲ್ಲಿ ಕಳೆದ ತಿಂಗಳು ನಡೆದ ಇಸಿಸ್ ದಾಳಿ ಕಳೆದ ಒಂದು ವರ್ಷದಲ್ಲೇ 89ನೇ ಪ್ರಕರಣವಾಗಿದೆ. ಇಸಿಸ್ ಸಂಘಟನೆ ಇಂತಹ ಆತ್ಮಾಹುತಿ ದಾಳಿಗಳನ್ನು ನಡೆಸಲು ಮಕ್ಕಳು, ಹದಿಹರೆಯದವರನ್ನು ನಿಯೋಜಿಸುತ್ತಿದೆ ಎಂದು ಹೊಸ ಸಂಶೋಧನೆ ಪ್ರಕಾರ ತಿಳಿದು ಬಂದಿದೆ. ಈ ಭಯೋತ್ಪಾದಕ ಸಂಘಟನೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಕಳುಹಿಸಿ ಅವರನ್ನು ಸಾವನ ಸುಳಿಗೆ ಸಿಲುಕಿಸುತ್ತಿದೆ.
ಇಸ್ಲಾಮಿಕ್ ಸ್ಟೇಟ್ನ ಓರ್ವ 12 ವರ್ಷದ ಬಾಲಕನನ್ನು ಆತನ ಮನೆಯಿಂದ ಶಸ್ತ್ರಗಳಿಂದ ತುಂಬಿದ ವಾಹನದಲ್ಲಿ ಕರೆದೊಯ್ಯುತ್ತಿರುವ ವೇಳೆ ಆತ ತನ್ನ ತಂದೆಯನ್ನು ಅಪ್ಪಿಕೊಳ್ಳುತ್ತಿರುವ ವೀಡಿಯೋ ದೃಶ್ಯವನ್ನು ಇಸಿಸ್ ಬಿಡುಗಡೆ ಮಾಡಿದೆ. ಈ ಆನ್ಲೈನ್ ಸಂಗ್ರಹವು ಸಿರಿಯಾ ಮತ್ತು ಇರಾಕ್ಗಳಲ್ಲಿ ನಾಗರಿಕರ ಮತ್ತು ಸಾಮೂಹಿಕ ದಾಳಿ ನಡೆಸಲು ಮಕ್ಕಳನ್ನು ಬಳಸುತ್ತಿರುವ ಒಳನೋಟವನ್ನು ಒದಗಿಸಿಸುತ್ತದೆ.
ಈ ವೀಡಿಯೋವನ್ನು ಅಮೇರಿಕಾದ ಮಿಲಿಟರಿ ಅಕಾಡೆಮಿ ಬಿಡುಗಡೆ ಮಾಡಲಿದೆ.
ಕಳೆದ ತಿಂಗಳು ಸಿರಿಯಾದಲ್ಲಿ ಮಗುವೊಂದು ರಿಮೋಟ್ ಕಂಟ್ರೋಲ್ ಮೂಲಕ ಕಾರ್ ಬಾಂಬ್ ಸ್ಫೋಟಿಸಿ ಮೂವರು ಪತ್ತೇದಾರ ಆರೋಪಿಗಳು ಸಾವನ್ನಪ್ಪಿದ ವೀಡಿಯೋ ಕೂಡ ಇಸಿಸ್ ಬಿಡುಗಡೆ ಮಾಡಿದೆ.
ಸುಮಾರು 8ರಿಂದ 9 ಅಥವಾ 12ರಿಂದ 16 ವರ್ಷದೊಳಗಿನ ದಿಹರೆಯದ ಮಕ್ಕಳನ್ನೇ ಇಸಿಸ್ ಗುರಿಯಾಗಿಸಿದೆ. ಆದರೆ ಈವರೆಗೆ 18 ಅಥವಾ ಅದ್ದಕ್ಕಿಂ ಮೇಲ್ಪಟ್ಟ ಯುವಕರ ಸಂಖ್ಯೆ ಬಹಳ ಕಡಿಮೆ ಎಂದು ಸಂಶೋಧನೆ ವೇಳೆ ತಿಳಿದು ಬಂದಿದೆ ಎಂದು ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿಯ ಸಂಶೋಧರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.