ಚಿಕ್ಕಬಳ್ಳಾಪುರ : ಜೀವನ್ ಪ್ರಕಾಶನ, ಚಿಕ್ಕಬಳ್ಳಾಪುರ ಇವರ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ರಾಜ್ಯಮಟ್ಟದ ಯುಗಾದಿ ಕಾವ್ಯಯನ್ನು ಆಯೋಜಿಸಲಾಗಿದೆ. ಆಸಕ್ತಿಯುಳ್ಳವರು ತಮ್ಮ ಕವಿತೆಗಳು ಕಳುಹಿಸಬಹುದು. ನಿಯಮಗಳು ಈ ಕೆಳಗಿನಂತೆ ಇರುತ್ತವೆ.
01. ಸ್ವರಚಿತ ಕವಿತೆಗಳು ಮಾತ್ರ ಕಳುಹಿಸಬೇಕು. 02. ಒಬ್ಬರು ಒಂದು ಕವಿತೆ ಮಾತ್ರ ಕಳುಹಿಸಬೇಕು. 03. ಕವಿತೆ 35 ಸಾಲುಗಳನ್ನು ಮೀರಿರಬಾರದು.
04. ಕವಿತೆಯ ಜೊತೆಯಲ್ಲಿ ಕವಿಯ ಹೆಸರು, ಅಂಚೆ ವಿಳಾಸ, ದೂರವಾಣಿ ಸಂಖ್ಯೆ ನಮೂದಿಸಿರಬೇಕು ಮತ್ತು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಕಳುಹಿಸಬೇಕು.
05. ಯಾವುದೇ ರೀತಿಯ ಪ್ರವೇಶ ಧನ ಇರುವುದಿಲ್ಲ. 06. ಇ-ಮೇಲ್ ಮೂಲಕ ಕವಿತೆಗಳನ್ನು ಕಳುಹಿಸುವವರು ನುಡಿ ಅಥವಾ ಯೂನಿಕೋಡ್ ತಂತ್ರಾಶದಲ್ಲಿ ಟೈಪಿಸಿ ಕಳುಹಿಸಬೇಕು.
07. ಪ್ರಥಮ ಮತ್ತು ದ್ವಿತಿಯ ಬಹುಮಾನ ಇರುತ್ತದೆ. (ತೃತೀಯ ಬಹುಮಾನ ಇರುವುದಿಲ್ಲ) ಮೆಚ್ಚುಗೆ ಪಡೆದ ಕವಿತೆಗಳನ್ನು ಗುರುತಿಸಲಾಗುವುದು (ಇದಕ್ಕೆ ಸಂಖ್ಯೆಗಳ ಮಿತಿ ಇರುವುದಿಲ್ಲ). 08. ಕವಿತೆ ಕಳುಹಿಸಿಕೊಡಲು ಕೊನೆಯ ದಿನಾಂಕ ಮಾರ್ಚ್ 05
09. ಅವಧಿ ಮೀರಿ ಬಂದ ಮತ್ತು ನಿಯಮ ಮೀರಿದ ಕವಿತೆಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. 10. ಬಹುಮಾನ ಪಡೆದ ಮತ್ತು ಮೆಚ್ಚುಗೆ ಕವಿತೆಗಳನ್ನು ಸೇರಿಸಿ ಕವನ ಸಂಕಲನ ಹೊರತರಲಾಗುವುದು. (ಇದಕ್ಕೆ ಪ್ರಕಟಣಾ ವೆಚ್ಚ ಇರುವುದಿಲ್ಲ)
ಕವಿತೆಗಳು ಕಳುಹಿಸಿಕೊಡಬೇಕಾದ ವಿಳಾಸ :ರಾಜಹಂಸ, ಸಂಪಾದಕರು, ಜೀವನ್ ಪ್ರಕಾಶನ, ಅಂಚೆ ಪೆಟ್ಟಿಗೆ ಸಂಖ್ಯೆ 03, ಚಿಕ್ಕಬಳ್ಳಾಪುರ -562101.
ಇ-ಮೇಲ್:- jeevanprakashana@gmail.com ಮಾಹಿತಿಗೆ +91 9901982195 ಕ್ಕೆ ಸಂಪರ್ಕಿಸಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.