ಮೆಲ್ಬೋರ್ನ್: ಭಾರತೀಯ ಮೂಲದ ಮಹಿಳೆ ಹರಿಂದರ್ ಸಿಧು ಅವರನ್ನು ಆಸ್ಟ್ರೇಲಿಯಾ ತನ್ನ ಭಾರತದ ಹೊಸ ಹೈಕಮಿಷನರ್ ಆಗಿ ನೇಮಿಸಿದೆ. ಆಸ್ಟೇಲಿಯಾದ ಪ್ರಸ್ತುತ ಹೈಕಮಿಷನರ್ ಪ್ಯಾಟ್ರಿಕ್ ಸಕ್ಲಿಂಗ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಆಸ್ಟ್ರೇಲಿಯಾದ ವ್ಯಾಪಾರ ಮತ್ತು ವಿದೇಶ ವ್ಯವಹಾರಗಳ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅವರು, ಬಹುಪಕ್ಷೀಯ ನೀತಿ ವಿಭಾಗದ ಪ್ರಥಮ ಸಹಾಯಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೇ ಸಿಧು ಅವರು ಮಾಸ್ಕೋ ಮತ್ತು ಡಮಾಸ್ಕಸ್ಗಳಲ್ಲಿಯೂ ಕಾರ್ಯ ನಿರ್ವಹಿಸಿದ್ದಾರೆ.
ಇಂಡೋ- ಪ್ಯಾಸಿಫಿಕ್ ಪ್ರದೇಶದಲ್ಲಿ ಭಾರತವು ಆಸ್ಟ್ರೇಲಿಯಾದ ಪ್ರಮುಖ ಪಾಲುದಾರರಲ್ಲಿ ಒಂದಾಗಿದೆ. ಇದು ನಮ್ಮ ೧೦ನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ಆಗಿದ್ದು, ಈ ಎರಡು ದೇಶಗಳ ನಡುವಿನ ಹೂಡಿಕೆ ೨೦ ಬಿಲಿಯನ್ ಡಾಲರ್ ಆಗಿದೆ ಎಂದು ಆಸ್ಟ್ರೇಲಿಯಾದ ವಿದೇಶ ವ್ಯಾವಹಾರಗಳ ಸಚಿವೆ ಜ್ಯೂಲಿ ಬಿಷಪ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.