ಮುಂಬಯಿ: 26/11ರ ಮುಂಬಯಿ ದಾಳಿಯ ಬಗ್ಗೆ ಮುಂಬಯಿ ನ್ಯಾಯಾಲಯದ ಮುಂದೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ನೀಡಿರುವ ಡೇವಿಡ್ ಹೆಡ್ಲಿ, ಪಾಕಿಸ್ಥಾನ ಗುಪ್ತಚರ ಇಲಾಖೆ ಐಎಸ್ಐನ ಹೆಸರನ್ನು ಉಲ್ಲೇಖ ಮಾಡಿದ್ದಾನೆ.
ಅಲ್ಲದೇ 2008ರ ನವೆಂಬರ್ನಲ್ಲಿ ಮುಂಬಯಿಯ ಮೇಲೆ ದಾಳಿ ನಡೆಸುವಲ್ಲಿ ನಾವು ಸಫಲರಾದೆವು, ಆದರೆ ಅದಕ್ಕೂ ಮುನ್ನ ನಾವು ರೂಪಿಸಿದ್ದ ಅಂತಹ ಎರಡು ದಾಳಿ ಸಂಚುಗಳು ವಿಫಲಗೊಂಡಿವೆ ಎಂದು ಹೆಡ್ಲಿ ಹೇಳಿದ್ದಾನೆ.
ಇಂದು ಆತನನ್ನು ಅಮೆರಿಕಾದ ರಹಸ್ಯ ಸ್ಥಳದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ 5 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ಈ ವೇಳೆ ಆತ ಮುಂಬಯಿ ದಾಳಿಯ ಹಿಂದೆ ಐಎಸ್ಐ ಕೈವಾಡವಿದೆ ಎಂಬುದಾಗಿ ಹೇಳಿದ್ದಾನೆ ಎನ್ನಲಾಗಿದೆ.
ಆತನ ಹೇಳಿಕೆಯಿಂದ ಐಎಸ್ಐ ಮತ್ತು ಲಷ್ಕರ್ ನಡುವೆ ನೇರ ಸಂಪರ್ಕವಿರುವುದು ಸಾಬೀತಾಗಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.