ಇಸ್ಲಾಮಾಬಾದ್: ಮತ್ತೊಮ್ಮೆ ಪಾಕಿಸ್ಥಾನ ತನ್ನ ಡಬ್ಬಲ್ ಸ್ಟ್ಯಾಂಡರ್ಡ್ನ್ನು ಪ್ರದರ್ಶಿಸಿದೆ. ಇತ್ತೀಚಿನ ಪಠಾನ್ಕೋಟ್ ವಾಯುನೆಲೆಯ ಮೇಲಿನ ದಾಳಿಗೆ ಸಂಬಂಧಿಸಿದಂತೆ ಉಗ್ರ ಮೌಲಾನಾ ಮಸೂದ್ ಅಝರ್ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಅದು ಹೇಳಿದೆ.
ಮೌಲಾನಾ ಮಸೂದ್ ಅಝರ್ ಜೈಶೇ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥನಾಗಿದ್ದು, ಈತನೇ ಪಠಾನ್ಕೋಟ್ ದಾಳಿ ರುವಾರಿ ಎಂದು ಭಾರತ ಬಲವಾಗಿ ವಾದಿಸಿದ್ದು, ಇದಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಪಾಕಿಸ್ಥಾನಕ್ಕೆ ನೀಡಿತ್ತು.
ಭಾರತ ಈ ದಾಳಿ ಬಗೆಗಿನ ಎಲ್ಲಾ ಮಾಹಿತಿಗಳನ್ನು ಪಾಕ್ನೊಂದಿಗೆ ಹಂಚಿಕೊಂಡಿದ್ದು, ಅಲ್ಲಿನ ಪ್ರಧಾನಿ ಇದರ ತನಿಖೆಗೆ ವಿಶೇಷ ತಂಡವನ್ನೂ ರಚಿಸಿದ್ದರು. ಅಲ್ಲದೇ ಜೈಶೇ ಮೊಹಮ್ಮದ್ ಸಂಘಟನೆ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು.
ಇದೀಗ ಪಠಾನ್ಕೋಟ್ ದಾಳಿ ಬಗ್ಗೆ ತನಿಖೆ ನಡೆಸಲು ಪಾಕಿಸ್ಥಾನ ರಚಿಸಿದ ವಿಶೇಷ ತನಿಖಾ ತಂಡ ಇದೀಗ ಭಾರತದ ವಾದವನ್ನು ತಳ್ಳಿ ಹಾಕಿದ್ದು, ಪಠಾನ್ಕೋಟ್ ದಾಳಿ ರುವಾರಿ ಅಝರ್ ಎನ್ನಲು ಯಾವುದೇ ಸಾಕ್ಷಿಗಳಿಲ್ಲ ಎಂದಿದೆ. ಈ ಮೂಲಕ ತನ್ನ ಹಳೆ ಚಾಳಿಯನ್ನು ಮುಂದುವರೆಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.