ಬಂಟ್ವಾಳ : ಭಾರತದ ಜೀವಾಲ ಧರ್ಮ. ಭಾರತದ ಉಸಿರು ಧರ್ಮ ಮತ್ತು ನಂಬಿಕೆ. ಭಾರತ ನಾಶವಾದರೆ ಇಡೀ ವಿಶ್ವವೇ ನಾಶವಾಗುತ್ತದೆ ಎಂದು ಪರಮ ಪೂಜ್ಯ ಶ್ರೀ ಶ್ರೀ ಸ್ವಾಮಿ ವಿವೇಕ ಚೈತನ್ಯಾನಂದ ಶ್ರೀ ರಾಮಕೃಷ್ಣ ತಪೋವನ, ಪೊಳಲಿ ಇವರು ಆಶೀರ್ವಚನ ನೀಡಿದರು.
ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರ ತುಳಸೀವನ ಬೋಳಂತೂರು ಇದರ 13ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಶ್ರೀ ಸ್ವಾಮಿಜಿಗಳು ಆಶೀರ್ವಚನ ನೀಡುತ್ತಾ ಮನೆಯಲ್ಲಿ ತಂದೆ ತಾಯಿ ಮಕ್ಕಳಿಗೆ ಸಂಸ್ಕಾರ ಕಲ್ಪಿಸಿ ಮಕ್ಕಳಿಗೆ ಸಮಯ ಕೊಡಿ ಉತ್ತಮ ರೀತಿಯಲ್ಲಿ ಬೆಳೆಸಿ ದೇಶಕ್ಕಾಗಿ ಪ್ರಾಣ ಕೊಡುವಂತಹ ದೇಶಭಕ್ತ ಮಕ್ಕಳನ್ನಾಗಿ ಮಾಡಿ ಎಂದು ಹೇಳಿದರು .
ಭಜನಾ ಮಂದಿರ, ಭಜನೆಯಿಂದ ಉತ್ತಮ ಸಂಸ್ಕಾರ ನೀಡಲು ಸಾಧ್ಯ ಎಂದು ಕೆ.ಎಂ.ಕೃಷ್ಣ ಭಟ್, ಕೊಂಕೋಡಿ, ನಿರ್ದೇಶಕರು ಕೆ.ಎಂ.ಎಫ್. ಮಂಗಳೂರು, ಇವರು ತಿಳಿಸಿದರು. ನಿವೃತ್ತ ವಿಜಯ ಬ್ಯಾಂಕ್ ಎ.ಜಿ.ಎಂ. ಬೋಳಂತೂರು ಹೊಸಮನೆ ಪಿ.ಎ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾದ ಕ್ಯಾಂಪ್ಕೋ ಅಧ್ಯಕ್ಷರಾದ ಶ್ರೀ ಎಸ್. ಆರ್.ಸತೀಶ್ಚಂದ್ರ ಮಾತನಾಡಿ, ದೇವರು, ಧರ್ಮ,ದೇಶ ಇದು ಮನುಷ್ಯನ ಕಣ್ಣು, ಕಿವಿ, ಮೂಗು ಇದ್ದ ಹಾಗೆ. ಇದರಲ್ಲಿ ಯಾವುದನ್ನು ಒಂದನ್ನು ಬಿಟ್ಟರು ಅಂಗವಿಕಲರಾದಂತೆ. ಈ ದೇಶದಲ್ಲಿ ಸಾಮಾನ್ಯ ಮನುಷ್ಯ ರಾಮನಾಗುತ್ತಾನೆ. ದನ ಮೇಯಿಸುವವ ಧರ್ಮ ತಿಳಿಸುವ ಕೃಷ್ಣನಾಗುತ್ತಾನೆ. ಇಲ್ಲಿ ಏನೂ ಇಲ್ಲದೆ ಬೀದಿ ದೀಪದಲ್ಲಿ ಓದಿದಂತಹ ವ್ಯಕ್ತಿ ಈ ದೇಶದ ವಿಜ್ಞಾನಿ, ರಾಷ್ಟ್ರಪತಿಯಾಗುತ್ತಾನೆ. ಈ ದೇಶದಲ್ಲಿ ಚಾ ಮಾರುವವ ಈ ದೇಶದ ಪ್ರಧಾನಮಂತ್ರಿಯಾಗುತ್ತಾನೆ.
ಈ ದೇಶದಲ್ಲಿ ನೀರು ಕೇಳಿದರೆ ಹಾಲು ಕೊಡುವಂತಹ ನಾಡಾಗಿತ್ತು. ವಿದೇಶೀಯ ಅನುಕರಣೆಯಿಂದ ತನ್ನತನವನ್ನು ಕಳೆದುಕೊಂಡಿದೆ. ಮತ್ತೆ ಅದೇ ಸ್ಥಾನಕ್ಕೆ ಏರುತ್ತಲಿದೆ. ವಿಶ್ವದಲ್ಲಿ ಅತ್ಯಂತ ಹೆಚ್ಚು ಯುವಕರನ್ನು ಹೊಂದಿದ ದೇಶ. ವಿಶ್ವದಲ್ಲಿ ಅತ್ಯಂತ ಡಾಕ್ಟರ್, ಇಂಜಿನಿಯರ್ ಗಳನ್ನು ಕೊಡುತ್ತಿರುವಂತಹ ದೇಶ ಭಾರತ. ಈ ದೇಶದಲ್ಲಿ ಹುಟ್ಟಿದ್ದೇ ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಟ್ರಸ್ಟ್ನ ಅಧ್ಯಕ್ಷರು ವೆಂಕಟ್ರಮಣ ಬಳ್ಳಕ್ಕುರಾಯ ,ಉಪಾಧ್ಯಕ್ಷರಾದ ಕೊ.ಶಿವಪ್ಪ, ಕೋಶಾಧಿಕಾರಿ ಸುಧಾಕರ ರೈ, ಭಜನಾ ಮಂಡಳಿ ಅಧ್ಯಕ್ಷರಾದ ಸಂಕಪ್ಪ ಮೂಲ್ಯ ನೆಕ್ಕರಾಜೆ, ಕಾರ್ಯದರ್ಶಿ ಮುರಳೀಧರ ಎನ್. ಕೋಶಾಧಿಕಾರಿ ರಾಜೇಶ್.ಕೆ. ಉತ್ಸವ ಸಮಿತಿ ಅಧ್ಯಕ್ಷ ಗಂಗಾಧರ ನೆಕ್ಕರಾಜೆ, ಕಾರ್ಯದರ್ಶಿ ಪ್ರಸಾದ್ ಗುಡ್ಡೆಮಾರ್ , ಕೋಶಾಧಿಕಾರಿ ಗೋಪಾಲ ಕೆ. ಉಪಸ್ಥಿತರಿದ್ದರು.
ರಾಜೇಶ್ ಕಲ್ಲಡ್ಕ ನಿರೂಪಿಸಿದರು. ನೇಮಿರಾಜ್ ರೈ ಸ್ವಾಗತಿಸಿದರು. ತುಳಸೀವನ ಮಂದಿರದ ಟ್ರಸ್ಟ್ನ ಕಾರ್ಯದರ್ಶಿ ಹರೀಶ್ ತುಳಸೀವನ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.