ನವದೆಹಲಿ: ಯೋಗಗುರು ರಾಮ್ದೇವ್ ಬಾಬಾ ಅವರು ಪತಂಜಲಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುವುದಾಗಿ ಘೋಷಿಸಿದಾಗ ಅದನ್ನು ಗಂಭೀರವಾಗಿ ಪರಿಗಣಿಸಿದವರಿಗಿಂತ ಹಾಸ್ಯ ಮಾಡಿದವರೇ ಹೆಚ್ಚು. ಯೋಗಿಯೊಬ್ಬನ ಉತ್ಪನ್ನಗಳು ಮಲ್ಟಿನ್ಯಾಷನಲ್ ಕಂಪನಿಗಳ ಉತ್ಪನ್ನಗಳ ಮುಂದೆ ನಿಲ್ಲಲಾರದು ಎಂದೇ ಎಲ್ಲರೂ ಭಾವಿಸಿದ್ದರು. ಆದರೀಗ ಅವರೆಲ್ಲರ ಯೋಚನೆಗಳು ಉಲ್ಟಾ ಹೊಡೆದಿದೆ.
ಪತಂಜಲಿಯ ನೂಡಲ್ಸ್ಗಳ ವ್ಯಾಪಾರ ಸದ್ಯಕ್ಕೆ ಉತ್ತುಂಗವನ್ನೇನು ಏರದೇ ಇರಬಹುದು ಆದರೆ ಅದು ತನ್ನ ಟೀಕಾಕಾರರನ್ನು ತಪ್ಪೆಂದು ಸಾಬೀತುಪಡಿಸಿದೆ. ನೆಸ್ಲೆಯಂತಹ ಕಂಪನಿಗೂ ಅದು ಸೆಡ್ಡು ಹೊಡೆಯುವ ಮಟ್ಟಕ್ಕೆ ತಲುಪಿದೆ ಎಂದರೆ ತಪ್ಪಗಲಾರದು.
ಎಚ್ಎಸ್ಬಿಸಿ ಗ್ಲೋಬಲ್ ರಿಸರ್ಚ್ ಪತಂಜಲಿ ಪ್ರಗತಿಯನ್ನು ’ಮೆಟಿಯಾರಿಕ್’ ಎಂದು ಬಣ್ಣಿಸಿದೆ, ಮಾತ್ರವಲ್ಲ ಇದು ಭಾರತದ ಅತೀ ವೇಗವಾಗಿ ಪ್ರಗತಿ ಕಾಣುತ್ತಿರುವ ಗ್ರಾಹಕ ಉತ್ಪನ್ನ ಬ್ರಾಂಡ್ ಎಂದು ಹೇಳಿದೆ.
ಸಣ್ಣ ಫಾಮರ್ಸಿಯಾಗಿ ಕಾರ್ಯಾರಂಭ ಮಾಡಿದ ಪತಂಜಲಿ ಇದೀಗ ಪೂರ್ಣ ಪ್ರಮಾಣದ ಗ್ರಾಹಕ ಉತ್ಪನ್ನಗಳನ್ನು ಮಾರಾಟ ಮಾಡುವಷ್ಟು ವಿಸ್ತರಿಸಿದೆ. ಖಾದ್ಯ ತೈಲ, ಬಿಸ್ಕತ್ತು, ನೂಡಲ್ಸ್, ಸಾಬೂನು, ಕ್ರೀಮ್, ಶ್ಯಾಂಪೂ ಹೀಗೆ ಎಲ್ಲವನ್ನೂ ಅದು ತಯಾರಿಸುತ್ತಿದೆ. ಸದ್ಯ ಅದರ ಆದಾಯ 450 ಕೋಟಿ ಇದ್ದು, ಮುಂಬರುವ ದಿನಗಳಲ್ಲಿ ಅದು 5 ಸಾವಿರ ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಎಚ್ಎಸ್ಬಿಸಿ ಹೇಳಿದೆ.
ರೈತರಿಂದ ನೇರವಾಗಿ ಪದಾರ್ಥಗಳನ್ನು ಪಡೆದು ಉತ್ಪನ್ನಗಳನ್ನು ಪತಂಜಲಿ ತಯಾರಿಸುತ್ತಿರುವುದರಿಂದ, ಉದ್ಯೋಗಿಗಳಿಗೆ ಸಾಧಾರಣ ಸಂಬಳ ನೀಡುತ್ತಿರುವುದರಿಂದ ಉತ್ಪನ್ನಗಳ ಬೆಲೆಯನ್ನೂ ಕಡಿಮೆ ಮಟ್ಟದಲ್ಲಿ ಇಡಲು ಅದಕ್ಕೆ ಸಾಧ್ಯವಾಗಿದೆ ಎಂದು ಅದು ಹೇಳಿದೆ.
ಒಟ್ಟಿನಲ್ಲಿ ಯೋಗ ಗುರುವಾಗಿ ಹೆಸರು ಮಾಡಿದ್ದ ರಾಮ್ದೇವ್ ಬಾಬಾ ಅವರು ಇದೀಗ ಉದ್ಯಮಿಯಾಗಿಯೂ ಯಶಸ್ಸನ್ನು ಪಡೆಯುತ್ತಿದ್ದಾರೆ. ಇದು ಮೇಕ್ ಇನ್ ಇಂಡಿಯಾ ಯೋಜನೆಗೂ ಸಾಕಷ್ಟು ಉತ್ತೇಜನ ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.