ಲಾಹೋರ್: ಇಸ್ಲಾಮಾಬಾದಿನಾದ್ಯಂತ ಶುಕ್ರವಾರ ಸಮಾವೇಶಗಳನ್ನು ಏರ್ಪಡಿಸಿದ್ದ ಮುಂಬಯಿ ಸ್ಫೋಟದ ಮಾಸ್ಟರ್ ಮೈಂಡ್ ಸೈಯದ್ ಹಫೀಜ್ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿ ಭಾರತದ ವಿರುದ್ಧ ಹರಿಹಾಯ್ದಿದ್ದಾನೆ.
ಪಠಾನ್ಕೋಟ್ನಂತಹ ಹಲವಾರು ದಾಳಿಗಳನ್ನು ಮತ್ತೆ ಭಾರತದಲ್ಲಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದ ಆತ ಇದೀಗ ಮತ್ತೆ ಭಾರತಕ್ಕೆ ಸವಾಲೊಡ್ಡಿದ್ದಾನೆ. ಅಲ್ಲದೇ ’ಕಾಶ್ಮೀರಿ ಸಾಲಿಡ್ಯಾರಿಟಿ ಡೇ’ ಯನ್ನು ಆಚರಿಸಿದ್ದಾನೆ.
ಲಾಹೋರ್, ಫೈಸಲಾಬಾದ್, ಇಸ್ಲಾಮಾಬಾದ್, ಕರಾಚಿ, ಪೇಶಾವರ, ಮುಜಾಫರಾಬಾzನಲ್ಲಿ ಸಮಾವೇಶಗಳನ್ನು ನಡೆಸಿದ ಆತ, ದೊಡ್ಡ ಪರದೆಯಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸೆಗಳನ್ನು ಪ್ರದರ್ಶಿಸಿ ಅಲ್ಲಿನ ಜನರನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡಿದ್ದಾನೆ.
ಜನರನ್ನು ಉದ್ದೇಶಿಸಿ ಮಾತನಾಡಿದ್ದ ಈತ, ಕಾಶ್ಮೀರದ ಉಗ್ರಗಾಮಿ ನಾಯಕ ಸೈಯದ್ ಸಲಾಹುದ್ದೀನ್ಗೆ ಪಾಕಿಸ್ಥಾನ ಅಭಾರಿಯಾಗಿರಬೇಕು ಎಂದಿದ್ದಾನೆ. ಸಲಾಹುದ್ದೀನ್ ಯುನೈಟೆಡ್ ಜಿಹಾದ್ ಕೌನ್ಸಿಲ್ ಮುಖಂಡನಾಗಿದ್ದು, ಇದು ಪಠಾನ್ಕೋಟ್ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ.
ಸಲಾಹುದ್ದೀನ್ ಪಾಕಿಸ್ಥಾನದ ದೊಡ್ಡ ಹಿತೈಷಿಯಾಗಿದ್ದು, ಪಠಾನ್ಕೋಟ್ ದಾಳಿ ಹೊಣೆ ಹೊತ್ತು ಈತ ಪಾಕಿಸ್ಥಾನವನ್ನು ತೊಂದರೆಯಿಂದ ದೊರವಿಟ್ಟಿದ್ದಾನೆ ಎಂದು ಸಯೀದ್ ಕೊಂಡಾಡಿದ್ದಾನೆ.
ಆತ ಭಾರತದ ವಿರುದ್ಧ ಬಹಿgಂಗವಾಗಿ ಭಾಷಣ ಬಿಗಿಯುತ್ತಿದ್ದರೂ ಪಾಕ್ ಸರ್ಕಾರ ಮಾತ್ರ ಮೌನವಾಗಿ ಆತನನ್ನು ಬೆಂಬಲಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.