ಬೆಂಗಳೂರು : ನಗರದ ನಾಟ್ಯಾಲಯ ಸಂಸ್ಥೆ ಈ ಬಾರಿಯ ವೀಕೆಂಡ್ ಅನ್ನು ಸಮೃದ್ಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕಲಾರಾಧಕರನ್ನು ರಂಜಿಸಲಿದೆ. ಫೆಬ್ರವರಿ 7 ಭಾನುವಾರ ನಾನ್ಸ್ಟಾಪ್ ನಾಟ್ಯೋತ್ಸವ ಹೆಸರಿನ ನಿರಂತರ 12 ತಾಸುಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಂದೇ ಸೂರಿನಡಿ ಆಯೋಜಿಸಿದೆ.
ಜೆಪಿನಗರದ ದುರ್ಗಾಪರಮೇಶ್ವರೀ ಮೈದಾನದಲ್ಲಿ 1000 ವಿದ್ಯಾರ್ಥಿಗಳಿಂದ ಈ ಪ್ರದರ್ಶನ ನಡೆಯಲಿದ್ದು ಬೆಳಗ್ಗೆ 10 ರಿಂದ ರಾತ್ರಿ 10 ಗಂಟೆಯವರೆಗೆ ಅಭೂತ ಪೂರ್ವ ಸಾಂಸ್ಕೃತಿಕ ಲೋಕ ತೆರೆದುಕೊಳ್ಳಲಿದೆ. ನೃತ್ಯಲೋಕದಲ್ಲೊಂದು ಹೊಸದಾಖಲೆ ಬರೆಯಲಿರುವ ನಿರಂತರ ೧೨ ತಾಸುಗಳ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಗೆ ಉಚಿತ ಪ್ರವೇಶ.
ಒಂದೇ ವೇದಿಕೆಯಲ್ಲಿ ನಿರಾಂತರವಾಗಿ ಭರತನಾಟ್ಯ, ಕಥಕ್, ಮೋಹಿನಿ ಅಟ್ಟಂ, ಗಿಟಾರ್, ಚಲನಚಿತ್ರ ಹಾಗೂ ಪಾಶ್ಚಾತ್ಯ ನೃತ್ಯ ವೈಭವ, ಸಂಗೀತ, ಯೋಗ, ಕರಾಟೆ ವೈವಿಧ್ಯಗಳು ಈ ಸಮಾರಂಭದ ವಿಶೇಷತೆ. ಸಮಾರಂಭದಲ್ಲಿ ನಟ, ನಟಿಯರು, ಗಣ್ಯರು ಹಾಗೂ ಸಹಸ್ರಾರು ಪ್ರೇಕ್ಷಕರು ಈ ಐತಿಹಾಸಿಕ ಮೆರಥಾನ್ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಲಿದ್ದಾರೆ ಎಂದು ಕಾರ್ಯಕ್ರಮದ ರೂವಾರಿ ನಾಟ್ಯಾಲಯ ಮುಖ್ಯಸ್ಥ ಬಿ.ಕೆ.ದಿನಕರ್ ಹಾಗೂ ಎನ್.ಸವಿತಾ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.