ಸಾನ್ ಫ್ರಾನ್ಸಿಸ್ಕೊ: ಇಂಟರ್ನೆಟ್ ದೈತ್ಯ Yahoo ಕಂಪೆನಿಯು ತನ್ನ 1700 ಸಿಬ್ಬಂದಿಗಳನ್ನು ಕೈಬಿಡಲಿದೆ. ಕೆಲವು ಮಾರ್ಪಾಡುಗಳನ್ನು ಮಾಡುವ ಮೂಲಕ ಹಾಗೂ ಹೆಚ್ಚುವರಿ ಸೇವೆಗಳನ್ನು ಕಡಿತಗೊಳಿಸುವ ಮೂಲಕ ಸಿಇಒ ಮರಿಸ್ಸಾ ಮೇಯರ್ Yahoo ಕಂಪೆನಿಯಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳುತ್ತಾರೆಯೇ ಎಂದು ನಿರ್ಧರಿಸಲಾಗುವುದು.
ಕಂಪೆನಿಯು ತನ್ನ ಶೇ.15ರಷ್ಟು ಸಿಬ್ಬಂದಿಗಳ ಮೇಲೆ ವ್ಯಯಿಸುತ್ತಿದ್ದ ಸಮಯ, ಹಣ ಮತ್ತು ಸೇವೆಗಳು ವ್ಯರ್ಥವೆನಿಸಿದೆ. ಆದ್ದರಿಂದ ಕಂಪೆನಿ ಈ ನಿರ್ಧಾರ ಕೈಗೊಂಡಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ. ಕಂಪೆನಿಯು ಈ ವರ್ಷದ ನಿವ್ವಳ ಆದಾಯ ಕುಸಿತದಿಂದಾಗಿ 400 ಮಿಲಿಯನ್ ಡಾಲರ್ ವಾರ್ಷಿಕ ವೆಚ್ಚ ಕಡಿತಗೊಳಿಸಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
ಮರಿಸ್ಸಾ ಮೇಯರ್ ಅವರು Yahoo ಕಂಪೆನಿಯ ಹಕ್ಕು ಸ್ವಾಮ್ಯ, ರಿಯಲ್ ಎಸ್ಟೇಟ್ ಮತ್ತು ಬಂಡವಾಳ ಪತ್ರಗಳನ್ನು ಸುಮಾರು 1ರಿಂದ 3 ಬಿಲಿಯನ್ಗೆ ಮಾರಾಟ ಮಾಡುವ ಭರವಸೆ ಹೊಂದಿದ್ದಾರೆ. ಮರಿಸ್ಸಾ ಅವರು ಸಿಇಒ ಆದ ಬಳಿಕ ಆರಂಭಿಸಿದ Yahoo ಗೇಮ್ಸ್, Yahoo ಟಿವಿ ಮತ್ತು ಮ್ಯಾಗಜಿನ್ಗಳನ್ನು ನಿಲ್ಲಿಸಲಿದ್ದಾರೆ. ಅಲ್ಲದೇ ದುಬೈ, ಅರಬ್ ಎಮಿರೇಟ್ಸ್, ಮೆಕ್ಸಿಕೋ ಸಿಟಿ, ಅರ್ಜೆಂಟಿನಾ, ಮ್ಯಾಡ್ರಿಡ್, ಸ್ಪೇನ್, ಇಟಲಿಗಳಲ್ಲಿನ ಕಚೇರಿಗಳನ್ನು ಮುಚ್ಚಲಿದ್ದಾರೆ.
ಮೇಯರ್ ಅವರು Yahoo ಕಂಪೆನಿಯನ್ನು ಚಿಕ್ಕ ಸಂಸ್ಥೆಯಾಗಿಸಿ, ಹೆಚ್ಚು ಗಮನಾರ್ಹ ರೀತಿಯಲ್ಲಿ ಬಳಕೆದಾರರು, ಜಾಹೀರಾತುದಾರರು, ಪಾಲುದಾರರನ್ನು ಆಕರ್ಷಿಸುವ ಮೂಲಕ ಸ್ಪರ್ಧಾತ್ಮಕವಾಗಿ ಮುನ್ನಡೆಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.