ಬೆಂಗಳೂರು : ಆರೋಗ್ಯ ಕವಚ 108 ಆಯಂಬುಲೆನ್ಸ್ ಸಿಬ್ಬಂದಿ ಮತ್ತು ಜಿವಿಕೆ ನಡುವಿನ ಸಂಘರ್ಷದಿಂದ ಸಿಬ್ಬಂದಿಗಳು ಮುಷ್ಕರಕ್ಕಿಳಿದಿದ್ದಾರೆ.
ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ನೀಡುವಂತೆ ಒತ್ತಾಯಿಸಿ 160 ಮಂದಿ ಸಿಬ್ಬಂದಿಗಳು ಮುಷ್ಕರಕ್ಕಿಳಿದಿದ್ದು, ಜಿವಿಕೆ ಸಂಸ್ಥೆ 160 ಜನರನ್ನು ಕೆಲಸದಿಂದ ಅಮಾನತ್ತು ಮಾಡಿದೆ. ಸಿಬ್ಬಂದಿಗಳು ಕೆಲಸಕ್ಕೆ ಬಾರದದಿದ್ದಲ್ಲಿ ಎಸ್ಮಾ ಜಾರಿಗೊಳಿಸಿ ಅವರನ್ನು ವಜಾಮಾಡುವಂತೆ ಆರೋಗ್ಯ ಇಲಾಖೆಗೆ ಕೇಳಿಕೊಂಡಿದೆ. ಇದಕ್ಕೆ ಇಲಾಖೆ ಒಪ್ಪಿಗೆ ನೀಡಿದೆ.
ಅಲ್ಲದೇ ಸಿಬ್ಬಂದಿಗಳ ಲಭ್ಯತೆ ಇಲ್ಲದಿದ್ದಲ್ಲಿ ಕೆಎಸ್ಆರ್ಟಿಸಿ ಚಾಲಕರನ್ನು ಬಳಸುತ್ತಿದೆ. ಆದರೆ ಜಿವಿಕೆ ಸಂಸ್ಥೆಯು ಯಾರನ್ನೂ ಅಮಾನತುಗೊಳಿಸಿಲ್ಲ. ಮುಷ್ಕರ ನಿರತರನ್ನು ಬೆದರಿಸುವ ತಂತ್ರ ಅನುಸರಿಸುತ್ತಿದೆ ಎಂದು ಸಂಘವು ತಿಳಿಸಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.