ವಾಷಿಂಗ್ಟನ್: ಕೇಂದ್ರ ಸಂವಹನ ಹಾಗೂ ಐಟಿ ಸಚಿವ ರವಿಶಂಕರ್ ಪ್ರಸಾದ್ ಖ್ಯಾತ ಭಾರತೀಯರಾದ ಚಿತ್ರನಟ ಸೂಪರ್ಸ್ಟಾರ್ ಕಮಲ್ ಹಾಸನ್, ಕಾಂಗ್ರೆಸ್ ನಾಯಕ ಶಶಿ ತರೂರ್ ಹಾಗೂ ಚಿತ್ರ ನಿರ್ದೇಶಕ ಕರಣ್ ಜೋಹರ್ ಹಾವರ್ಡ್ ವಿಶ್ವವಿದ್ಯಾಲಯದ ೧೩ ಆವೃತ್ತಿಯ ಆರ್ಷಿಕ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಫೆಬ್ರವರಿ 6 ಮತ್ತು 7ರಂದು ನಡೆಯಲಿರುವ ಈ ವರ್ಷದ ಸಮ್ಮೇಳವು ’ಪರಿವರ್ತನೆಯತ್ತ ಭಾರತ, ಅವಕಾಶಗಳು ಮತ್ತು ಸವಾಲುಗಳು’ ವಿಚಾರವಾಗಿ ನಡೆಯಲಿದೆ.
ಉದ್ಯಮ ಮುಖಂಡರು, ಮನೊರಂಜನಾ ವೃತ್ತಿಪರರು, ಸರ್ಕಾರಿ ಅಧಿಕಾರಿಗಳು, ದಾನಿಗಳು ಮತ್ತಿತರ ನಾಯಕರು ಜಾಗತಿಕ ಮಟ್ಟದಲ್ಲಿ ಭಾರತದ ನಾಯಕತ್ವದ ಮಾರ್ಗಗಳ ಕುರಿತು ಚರ್ಚಿಸಲಿದ್ದಾರೆ ಎಂದು ವರದಿ ತಿಳಿಸಿದೆ.
ಅಂಕಣಕಾರ ಅಶುತೋಷ್ ವಾರ್ಶನೆ, ಬಿಜು ಜನತಾ ದಳ ಪಕ್ಷದ ಸದಸ್ಯ ಜಯ್ ಪಾಂಡಾ, ಲೋಕ ಸತ್ತಾ ಪಕ್ಷದ ಸ್ಥಾಪಕ ಜಯಪ್ರಕಾಶ್ ನಾರಾಯಣ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಮೇರಿಕಾದ ಮಾಜಿ ಭಾರತೀಯ ವಿದೇಶಾಂಗ ರಾಯಭಾರಿ ನಿರುಪಮಾ ರಾವ್ ವಿದೇಶಾಂಗ ನೀತಿಗಳ ಕುರಿತು ವಿಶೇಷ ಭಾಷಣ ಮಾಡಲಿದ್ದಾರೆ.
ಸಮಿತಿಯು ಕಳೆದ ಎರಡು ವರ್ಷಗಳಲ್ಲಿ ಭಾರತದ ವಿದೇಶಾಂಗ ನೀತಿಯ ಸಾಧನೆಗಳು, ಅದರ ಪ್ರಮುಖ ದೋಷಗಳು ಮತ್ತು ಪರಿಣಾಮಕಾರಿ ತಂತ್ರಗಳ ಬಗ್ಗೆ ಚರ್ಚಿಸಲಿದೆ. ನೆಟ್ ನ್ಯೂಟ್ರಾಲಿಟಿ, ಮಹಿಳಾ ಸಬಲೀಕರಣದ ಬಗ್ಗೆಯೂ ಈ ವೇಳೆ ಚರ್ಚಿಸಲಿದ್ದಾರೆ.
ಕಮಲ್ ಹಾಸನ್ ಅವರು ’ವಾಕ್ ಸ್ವಾತಂತ್ರ್ಯ’ ಹಾಗೂ ಕರಣ್ ಜೋಹರ್ ಅವರು ’ಹ್ಯಾಷ್ಟ್ಯಾಗ್ ಡೆಮೋಕ್ರಸಿ’ ಕುರಿತು ಭಾಷಣ ಮಾಡಲಿದ್ದಾರೆ. ಐಸಿಐಸಿಐ ಬ್ಯಾಂಕ್ನ ಚಂದ್ರ ಕೊಚ್ಚಾರ್ ಭಾರತದ ಹೊಸ ಬೆಳವಣಿಗೆಯ ಮಾದರಿಗಳ ಬಗ್ಗೆ ಭಾಷಣ ಮಾಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.