ಜಿನೇವಾ: ಸ್ವಸ್ ಏರ್ಲೈನ್ಸ್ ಒಂದು ವರ್ಷದ ಪ್ರಯೋಗಾರ್ಥ ತನ್ನ ಸೇವೆಗಳಲ್ಲಿ ಮೊಬೈಲ್ ಫೋನ್ ರೋಮಿಂಗ್ ಪ್ರವೇಶ ಒದಗಿಸಲಿದೆ. ವಿಮಾನಯಾನ ಸಂಸ್ಥೆಯು ತನ್ನ ಹೊಸ ಬೋಯಿಂಗ್ 777-300ER ವಿಮಾನದ ಕ್ಯಾಬಿನ್ ಕ್ಲಾಸ್ಗಳಲ್ಲಿ ವೈಫೈ ತರಲಿದೆ ಎಂದು ಸಂಸ್ಥೆ ತಿಳಿಸಿದೆ.
ಲುಫ್ತಾನ್ಸಾ ಒಡೆತನದ ಸ್ವಿಸ್ ವಿಮಾನಯಾನದ 9 ವಿಮಾನಗಳು ಫೆಬ್ರವರಿ ಒಳಗಾಗಿ ಈ ಸೇವೆಯನ್ನು ಪಡೆಯಲಿದೆ. ಈ ವಿಮಾನಗಳು ವೈರ್ಲೆಸ್ ಸಂಪರ್ಕ ಆಯ್ಕೆಗಳೊಂದಿಗೆ ವಿವಿಧ ಸಂಪರ್ಕ ಸೇವೆಗಳನ್ನು ಪ್ರಯಾಣಿಕರಿಗೆ ನೀಡಲಿದೆ.
ಸ್ವಿಸ್ ವಿಮಾನಯಾನ ಸಂಸ್ಥೆಯು ಬೋಯಿಂಗ್ 777-300ER ವಿಮಾನಗಳಿಗೆ ೩ ಪ್ರತ್ಯೇಕ ಡಾಟಾ ಪ್ಯಾಕ್ಗಳನ್ನು ಒದಗಿಸಲಿದೆ. ಕೇವಲ ಇ-ಮೇಲ್ ಅಥವಾ ನಿರ್ದಿಷ್ಟ ವೆಬ್ಸೈಟ್ಗಳನ್ನು ನೋಡಬಯಸುವ ಪ್ರಯಾಣಿಕರು 20MB(8.9 ಡಾಲರ್, 8 ಪೌಂಡ್) ಪ್ಯಾಕ್ ಖರೀದಿಸಬಹುದು. ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸುವವರಿಗೆ 50 MB (ಸುಮಾರು 18.8 ಡಾಲರ್, 17 ಪೌಂಡ್) ಪ್ಯಾಕ್ ಹಾಗೂ ಹೆಚ್ಚಿನ ಮಟ್ಟದಲ್ಲಿ ಇಂಟರ್ನೆಟ್ ಬಳಸುವವರಿಗೆ 120MB (38.5 ಡಾಲರ್, 35 ಪೌಂಡ್) ಪ್ಯಾಕ್ ವ್ಯವಸ್ಥೆ ನೀಡಲಿದೆ. ಇದಲ್ಲದೇ ಫಸ್ಟ್ ಕ್ಲಾಸ್ ದರ್ಜೆಯ ಪ್ರಯಾಣಿಕರಿಗೆ 50MB ಉಚಿತ ಡಾಟಾ ನೀಡಲಿದೆ.
ಈ ವಿಮಾನಗಳು ಹಾಂಗ್ ಕಾಂಗ್, ಸಾನ್ ಫ್ರಾನ್ಸಿಸ್ಕೊ, ಸಾವೊ ಪಾವ್ಲ, ಬ್ಯಾಂಗ್ಕಾಕ್, ಲಾಸ್ ಏಂಜಲೀಸ್ ಹಾಗೂ ಟೆಲ್ ಅವೀವ್ಗೆ ಹಾರಾಟ ನಡೆಸಲಿವೆ.
ಸ್ವಿಸ್ ಏರ್ಲೈನ್ಸ್ನ ಮೊಬೈಲ್ ಫೋನ್ ರೋಮಿಂಗ್ನಿಂದಾಗಿ ಪ್ರಯಾಣಿಕರು ಫೋನ್ ಕರೆ ಅಥವಾ ಎಸ್ಎಂಎಸ್ ಸಂದೇಶಗನ್ನೂ ಕಳುಹಿಸಬಹುದಾಗಿದೆ.
ಸ್ವಸ್ ಏರ್ಲೈನ್ಸ್ ಅಲ್ಲದೇ ಎಮಿರೇಟ್ಸ್, ಜೆಟ್ಬ್ಲೂ, ಏರ್ ಚೈನಾ ಹಾಗೂ ನೋವೇಯನ್ ವಿಮಾನಗಳು ವೈಫೈ ಸೇವೆಗಳನ್ನು ಒದಗಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.