ಸುಬ್ರಹ್ಮಣ್ಯ : ಗ್ರಾಮ ದೇವಸ್ಥಾನ, ಊರಿನ ದೇವಸ್ಥಾನ ಆರಾಧನಾ ಕೇಂದ್ರ ಮಾತ್ರವಲ್ಲ ಇಡೀ ಗ್ರಾಮದ ಶಕ್ತಿ ಕೇಂದ್ರಗಳಾಗಬೇಕು. ಅಲ್ಲದೆ ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುವ ಮೂಲಕ ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯವ ಮಹತ್ತರ ಜವಾಬ್ದಾರಿ ಇದೆ ಎಂದು ಜಿಲ್ಲಾ ಸಂಸ್ಕಾರ ಭಾರತಿ ಸಂಚಾಲಕ ಕಶೇಕೋಡಿ ಸೂರ್ಯನಾರಾಯಣ ಹೇಳಿದರು.
ಅವರು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.ಭಗವಂತ ಸರ್ವವ್ಯಾಪಿ ಹಾಗಿದ್ದರೂ ಆತನನ್ನು ಧಾರ್ಮಿಕ ಕೇಂದ್ರಗಳ ಮೂಲಕವೇ ಆರಾಧನೆ ಮಾಡಬೇಕು, ಏಕೆಂದರೆ ಆ ಮೂಲಕ ಸಮಸ್ತ ಸಮಾಜ ಒಂದಾಗಬೇಕು ಎಂಬ ಮಹತ್ತರ ಉದ್ದೇಶ ಇದೆ. ಅಂತರಾತ್ಮವೇ ದೇವರು, ಅಂತರಾತ್ಮ ಶುದ್ದವಾಗಿದ್ದರೆ ಶಕ್ತಿಯ ಸಂಚಯನವಾಗುತ್ತದೆ.ಹೀಗಾಗಿ ಮೊದಲು ಅಂತರಾತ್ಮ ಶುದ್ದವಾಗಬೇಕು ಎಂದರು.ದೇವಸ್ಥಾನ ಎಂದರೆ ಕೇವಲ ಧಾರ್ಮಿಕ ಕಾರ್ಯಕ್ರಮ ನಡೆಯುವ ಕೇಂದ್ರಗಳಲ್ಲ ಅದು ಶಕ್ತಿಯ ಸಂಚಯನದ ಕೇಂದ್ರ, ಸಮಸ್ತ ಸಮಾಜಕ್ಕೂ ಇಲ್ಲಿಂದ ಮಾರ್ಗದರ್ಶನ ದೊರೆಯಬೇಕು,ಹೀಗಾಗಿ ಸಾಮೂಹಿಕ ಪ್ರಾರ್ಥನೆ, ಆಚರಣೆಗಳು ಹೆಚ್ಚಾಗಬೇಕು, ಸಮಾಜ ಮುಖಿ ಕೆಲಸಗಳು ನಡೆಯಬೇಕು ಎಂದರು.
ಸಂಪುಟ ನರಸಿಂಹ ಸ್ವಾಮಿ ಮಠ ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಭಾಕಾರ್ಯಕ್ರಮ ಉದ್ಘಾಟಿಸಿದರು.ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಿ.ಕೆ.ಬೆಳ್ಯಪ್ಪ ಕಡ್ತಲ್ಕಜೆ ಸಭಾಧ್ಯಕ್ಷತೆ ವಹಿಸಿದ್ದರು.
ಮುಖ್ಯಅತಿಥಿಗಳಾಗಿ ಜಿಪಂ ಸದಸ್ಯ ಕೆಎಸ್ ದೇವರಾಜ್, ತಾಪಂ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಗುತ್ತಿಗಾರು ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ನಿತ್ಯಾನಂದ ಮುಂಡೋಡಿ,ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪಿ.ಬಿ.ದಿವಾಕರ ರೈ ,ಉಮೇಶ್ ಮುಂಡೋಡಿ,ತಾಪಂ ಸದಸ್ಯ ಮುಳಿಯ ಕೇಶವ ಭಟ್, ಮಡಪ್ಪಾಡಿ ಕ್ಷೇತ್ರದ ತಾಪಂ ಸದಸ್ಯೆ ತಾರಾ ಮಲ್ಲಾರ,ಮಡಪ್ಪಾಡಿ ಗ್ರಾಪಂ ಅಧ್ಯಕ್ಷೆ ಶಕುಂತಳಾ ಕೇವಳ,ಮೊಗ್ರ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನ ಆಡಳಿತ ಮೊಕ್ತೇಸರ ಎಂ.ಎನ್.ವೆಂಕಟ್ರಮಣ ಮೊಗ್ರ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಚಂದ್ರಶೇಖರ ತಳೂರು,ಪ್ರಧಾನ ಕಾರ್ಯದರ್ಶಿ ಮಾಧವ ಮೂಕಮಲೆ,ಕೋಶಾಧಿಕಾರಿ ಎಸ್.ಆರ್.ರಾಧಾಕೃಷ್ಣ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ರಾಧಾಕೃಷ್ಣ ಮಾವಿನಕಟ್ಟೆ,ಸಂಚಾಲಕ ವೆಂಕಟ್ ವಳಲಂಬೆ,ಸೇವಾ ಸಮಿತಿ ಅಧ್ಯಕ್ಷ ಡಿ.ಎಂ ರಾಮಣ್ಣ ಗೌಡ ಉಪಸ್ಥಿತರಿದ್ದರು.
ಇದೇ ವೇಳೆ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭ ಹಮ್ಮಿಕೊಂಡ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು.ನೂತನ ಭೋಜನ ಶಾಲೆ, ಆಡಳಿತ ಕಚೇರಿ, ಸಭಾಂಗಣ, ದೈವಗಳ ಗುಡಿಯ ಆವರಣ ಗೋಡೆಯನ್ನು ಉದ್ಘಾಟಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಮುಳಿಯ ತಿಮ್ಮಪ್ಪಯ್ಯ ಸ್ವಾಗತಿಸಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಪ್ರಸ್ತಾವನೆಗೈದರು.ಕಿಶೋರ್ ಕುಮಾರ್ ಪೈಕ ಹಾಗೂ ವಿನಯ ಕುಮಾರ್ ಮುಳುಗಾಡು ಕಾರ್ಯಕ್ರಮ ನಿರ್ವಹಿಸಿದರು.ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.