ವಾಷಿಂಗ್ಟನ್: ಅಮೇರಿಕಾದ ನೇವಡಾ ರಾಜ್ಯವು ಪ್ರವಾಸ ಮತ್ತು ಪ್ರವಾಸೋದ್ಯಮದ ಪ್ರಚಾರಾರ್ಥವಾಗಿ ದೆಹಲಿಯಲ್ಲಿ ಪ್ರವಾಸೋದ್ಯಮ ಕಚೇರಿ ತೆರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಚೇರಿ ಉದ್ಘಾಟನೆಗಾಗಿ ಭಾರತ ಪ್ರವಾಸ ಕೈಗೊಳ್ಳಲಿರುವ ನೇವಡಾ ಲೆಫ್ಟಿನೆಂಟ್ ಗವರ್ನರ್ ಥಾಮಸ್ ಹಚಿನ್ಸನ್, ಭಾರತದಲ್ಲಿ ಕಚೇರಿ ಸ್ಥಾಪಿಸಿದಲ್ಲಿ ನೇವಡಾ ರಾಜ್ಯಕ್ಕೆ ಅಂತಾರಾಷ್ಟ್ರೀಯ ಪ್ರವಾಸ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಸಲು ಹೆಚ್ಚಿನ ಅವಕಾಶ ಲಭಿಸಲಿದೆ. ನೇವಡಾ ರಾಜ್ಯ ಭಾರತದಲ್ಲಿ ಶೇ.6.5 ಪ್ರವಾಸ ಮಾರುಕಟ್ಟೆ ಹೊಂದಿದೆ. ಈ ಪ್ರವಾಸೋದ್ಯಮದ ಮುಖ್ಯ ಉದ್ದೇಶ ಭಾರತದಿಂದ ಅಮೇರಿಕಾದಲ್ಲಿರುವ ಕುಟುಂಬಗಳನ್ನು ಭೇಟಿ ಮಾಡುವುದಾಗಿದೆ ಎಂದು ಅವರು ಹೇಳಿದ್ದಾರೆ.
ಈ ಪ್ರವಾಸೋದ್ಯಮದಿಂದ ಸಿಲ್ವರ್ ಸ್ಟೇಟ್ ಎಂದೇ ಕರೆಯಲಾಗುವ ನೇವಡಾ ರಾಜ್ಯಕ್ಕೆ ಭಾರತದಿಂದ ಇನ್ನಷ್ಟು ಪ್ರವಾಸಿಗರು ಆಗಮಿಸುವ ವಿಶ್ವಾಸವಿದೆ ಎಂದು ಹಚಿನ್ಸನ್ ಈ ವೇಳೆ ಹೇಳಿದ್ದಾರೆ.
ಭಾರತೀಯರ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಗರಿಷ್ಠ ವಾರ್ಷಿಕ ಬಜೆಟ್ 5.451 ಡಾಲರ್ ಇದ್ದು, ಮಧ್ಯಮ ದರದಲ್ಲಿ ಹೋಟೆಲ್ಗಳಲ್ಲಿ ಉಳಿದುಕೊಳ್ಳಲು ಬಯಸುತ್ತಾರೆ. ಜೊತೆಗೆ ಸುಂಕ ರಹಿತ ಹಡಗು ಪ್ರಯಾಣ ಬಯಸುತ್ತಾರೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.