ನವದೆಹಲಿ: ಈ ಬಾರಿಯ ಗಣರಾಜ್ಯೋತ್ಸವದ ಪೆರೇಡ್ ಸಂದರ್ಭದಲ್ಲಿ ವಾಯುಸೇನೆಯ 27 ಏರ್ಕ್ರಾಫ್ಟ್ಗಳು ಹಾರಾಟ ನಡೆಸಲಿವೆ.
ಸಾಂಪ್ರದಾಯಿಕ ‘ಎನ್ಸೈನ್’ ರಚನೆಯಲ್ಲಿ ಪರೇಡ್ನ್ನು ಇವು ಲೀಡ್ ಮಾಡಲಿವೆ. Mi-17 V5 ಹೆಲಿಕಾಫ್ಟರ್ಗಳು ’ವೈ’ ರಚನೆ ಮಾಡಲಿವೆ.
ಎರಡನೇ ಹಂತದಲ್ಲಿ ಮೂರು Mi-35 ಹೆಲಿಕಾಫ್ಟರ್ಗಳು ’ಚಕ್ರ’ ರಚನೆ ಮಾಡಲಿವೆ.
ಮೂರು ಸಿ- ಸೂಪರ್ ಹರ್ಕಲ್ಸ್ ಏರ್ಕ್ರಾಫ್ಟ್ಗಳು ಮತ್ತು ಎರಡು Su-30 MKI ಏರ್ಕ್ರಾಫ್ಟ್ಗಳು ಗ್ಲೋಬ್ ರಚನೆ ಮಾಡಲಿವೆ.
ವಾಯುಸೇನೆಯ ಮಾರ್ಚಿಂಗ್ ಪಡೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ಕು ಅಧಿಕಾರಿಗಳ ಮತ್ತು 144 ಏರ್ಮೆನ್ಗಳು ಇರಲಿದ್ದಾರೆ. ವಾಯುಸೇನೆಯ ಬ್ಯಾಂಡ್ಗೆ ತಕ್ಕಂತೆ ಇವು ಪಥಸಂಚಲನ ಮಾಡಲಿವೆ. ಈ ಬ್ಯಾಂಡ್ನಲ್ಲಿ 27 ಮ್ಯೂಸಿಶಿಯನ್ಗಳು, ಮೂವರು ಡ್ರಮ್ ಮೇಜರ್ಗಳು ಇರಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.