ಬೆಂಗಳೂರು : ಮುಂಬರುವ ಶೈಕ್ಷಣಿಕ ವರ್ಷದಿಂದ ಎಲ್ಲಾ ವೃತ್ತಿಪರ ಕೋರ್ಸ್ನ ವಿದ್ಯಾರ್ಥಿಗಳು ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಕಲಿಯಬೇಕಿದೆ. ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಕಾನೂನು ವಿಭಾಗದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುಲು ಸರಕಾರ ಮುಂದಾಗಿದೆ.
ಹಂಪಿ ಕನ್ನಡ ವಿವಿಯ ಮಾಜಿ ಉಪಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯ ನೇತೃತ್ವದ ಸಮಿತಿಯು ಕಡ್ಡಾಯ ಕನ್ನಡಕ್ಕಾಗಿ ಹಲವು ಶಿಫಾರಸುಗಳನ್ನು ಮಾಡಿದೆ.
ಪದವಿಪೂರ್ವ ಶಿಕ್ಷಣದ ಮೂಲಕ ವೃತ್ತಿ ಶಿಕ್ಷಣಕ್ಕೆ ಬಂದವರಿಗೆ ನಾಲ್ಕನೇ ಸೆಮಿಸ್ಟರ್ವರೆಗೆ ಕನ್ನಡ. ಕನ್ನಡೇತರ ವಿದ್ಯಾರ್ಥಿಗಳಿಗೆ ಸರಳ ಕನ್ನಡ ಕಡ್ಡಾಯ ಹಾಗೂ ಪಠ್ಯಕ್ರಮದ ಶೇ.50 ಭಾಗ ಎಲ್ಲಾ ವಿವಿಗಳಲ್ಲೂ ಏಕರೂಪದಲ್ಲಿರಬೇಕು ಎಂದು ಸಮಿತಿ ಹೇಳಿದೆ.
ಉಳಿದ ಶೇ. 50 ಭಾಗ ವಿವಿಗಳು ವಿಶ್ವವಿದ್ಯಾಲಯದ ಸ್ಥಳೀಯ ಕನ್ನಡ ಭಾಷೆಯನ್ನು ಬಳಸಬಹುದು. ಪ್ರಸ್ತುತ ಪದವಿ ಕಾಲೇಜುಗಳಲ್ಲಿ ಜಾರಿಯಲ್ಲಿರುವ,ಕನ್ನಡ ಭಾಷೆಗೆ ಪರ್ಯಾಯವಾಗಿ ಬೇರೆ ಭಾಷೆಗಳ ಆಯ್ಕೆ ಸಲ್ಲದು, ಪದವಿ ಕಾಲೇಜುಗಳಲ್ಲಿ ಇಂಗ್ಲಿಷ್ ಕಡ್ಡಾಯಗೊಳಿಸಿದಂತೆ ಕನ್ನಡ ಪಠ್ಯವನ್ನೂ ಕಡ್ಡಾಯಗೊಳಿಸಬೇಕು ಎಂದು ಶಿಫಾರಸ್ಸು ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.