ರಾಜ್ಯ ಸರ್ಕಾರಗಳು ಹಾಗೂ ವಿದ್ಯುತ್ ವಿತರಣಾ ಕಂಪೆನಿಗಳು (ಡೆಸ್ಕಾಂ) ರೈತರಿಗೆ ಹಳೆಯ ಪಂಪ್ಸೆಟ್ಗಳ ಬದಲು ಹೆಚ್ಚು ಇಂಧನ ಉಳಿಸುವ ಹೊಸ ಪಂಪ್ಗಳನ್ನು ವಿತರಿಸಿ ವಿದ್ಯುತ್ ಸಬ್ಸಿಡಿಯ ದೊಡ್ಡ ಮೊತ್ತವನ್ನು ಉಳಿಸಬಹುದು.
ಒಂದು ಪ್ರಮಾಣಿಕ ಎಚ್ಪಿ ವಿದ್ಯುತ್ ಮೋಟಾರ್ ಪಂಪ್ ಸೆಟ್ ತ್ರಿ-ಫೇಸ್ ಹಂತದ ಸ್ಥಿರ 440 ವೋಲ್ಟೇಜ್ನಲ್ಲಿ ತಾಸಿಗೆ 3.73 ಕಿಲೋ ವ್ಯಾಟ್ ವಿದ್ಯುತ್ಶಕ್ತಿ ಬಳಸುತ್ತದೆ. ಒಂದು ಎಚ್ಪಿ 0.736 ಕಿಲೋ ವ್ಯಾಟ್ಗೆ ಸಮಾನವಾಗಿದೆ.
ಆದರೆ ಇಂದು ಭಾರತದ ರೈತರು ಬಳಸುವ ಪಂಪ್ಸೆಟ್ಗಳು 5 ಯೂನಿಟ್ (ಕಿಲೋವ್ಯಾಟ್) ವಿದ್ಯುತ್ ಬಳಸುತ್ತಿವೆ. ಈ ರೀತಿ ಬಳಸಲಾಗುತ್ತಿರುವ ಸುಮಾರು 2.1-2.2 ಕೋಟಿ ವಿದ್ಯುತ್ ಪಂಪ್ಸೆಟ್ಗಳು 10 ವರ್ಷಗಳಿಗಿಂತಲೂ ಹಳೆಯದಾಗಿವೆ. ರೈತರು ಈ ಪಂಪ್ಸೆಟ್ಗಳ ಮೋಟಾರ್ಗಳು ಸುಟ್ಟು ಹೋದರೂ ಸ್ಥಳೀಯರಿಂದ ಇಲ್ಲವೇ ತಾವಾಗಿಯೇ ಸರಿಪಡಿಸುತ್ತಾರೆ. ಇನ್ನು ಸಾಮಾನ್ಯವಾಗಿ ಕಡಿಮೆ ದಕ್ಷತೆ ಮತ್ತು ಹೆಚ್ಚು ವಿದ್ಯುತ್ಶಕ್ತಿ ಬಳಕೆಗೆ ಕಾರಣವಾದ ಕಳಪೆ ಗುಣಮಟ್ಟದ ತಾಮ್ರದ ತಂತಿಗಳನ್ನು ಬಳಸುತ್ತಾರೆ ಎಂದು ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿ.(ತಾಂತ್ರಿಕ)ನ ಹಿರಿಯ ವ್ಯವಸ್ಥಾಪಕ ಶಶಿಕಾಂತ್ ಹೇಳುತ್ತಾರೆ.
ವಿದ್ಯುತ್ ಹಣಕಾಸು ಕಾರ್ಪೋರೇಶನ್ ವರದಿ ಪ್ರಕಾರ, 2013-14ರಲ್ಲಿ ಅದು ಕೃಷಿ ವಲಯಕ್ಕೆ 150.98 ಬಿಲಿಯನ್ ಯೂನಿಟ್ ವಿದ್ಯುತ್ ಪೂರೈಸಿದೆ. ಕೃಷಿಗೆ ಒಟ್ಟು 21.69ರಷ್ಟು ವಿದ್ಯುತ್ ಬಳಕೆಯಾಗಿದ್ದು, ಇದರಿಂದ ಡಿಸ್ಕಾಂ ಆದಾಯ ಪಡೆದದ್ದು ಕೇವಲ 8.03ರಷ್ಟು ಮಾತ್ರ.
ಇತ್ತೀಚೆಗೆ ಅನೇಕ ರಾಜ್ಯಗಳಲ್ಲಿ ರೈತರಿಗೆ ಪ್ರತಿ ಎಚ್ಪಿಗೆ ಪ್ರತಿ ತಿಂಗಳಿಗೆ ಸರಾಸರಿ ರೂ.300 ಶುಲ್ಕ ವಿಧಿಸಲಾಗುತ್ತಿದೆ. ಒಂದು ಹಳೆಯ ಪಂಪ್ ಗಂಟೆಗೆ 5 ಯೂನಿಟ್ರಂತೆ ವರ್ಷಿಕ 9000 ಯೂನಿಟ್ ಬಳಸಿದರೆ, ಹೊಸ ಪಂಪ್ ಗಂಟೆಗೆ 3.73 ಯೂನಿಟ್ರಂತೆ ಶೇ.25ರಷ್ಟು ಇಳಿಕೆಯೊಂದಿಗೆ ವಾರ್ಷಿಕ 6,715 ಯೂನಿಟ್ಗೆ ತಗ್ಗಿಸಬಹುದು.
ಕರ್ನಾಟಕದ ಹುಬ್ಬಳ್ಳಿ ಮತ್ತು ಮಂಡ್ಯ ಜಿಲ್ಲೆಗಳ ರೈತರ 2000 ಪಂಪ್ಗಳನ್ನು ಹೊಸ ಬಿಇಇ (ಇಂಧನ ದಕ್ಷತೆ ಬ್ಯೂರೋ) ಪಂಪ್ಗಳಿಗೆ ಬದಲಾಯಿಸಲಾಗಿದೆ. ಇದರಿಂದ ಶೇ.25-35ರಷ್ಟು ವಿದ್ಯುತ್ ಉಳಿತಾಯವಾಗಿದೆ ಎನ್ನುತ್ತಾರೆ ಶಶಿಕಾಂತ್. ಆಂಧ್ರ ಪ್ರದೇಶದ ರಾಜನಗರಮ್ನ ಪೂರ್ವ ಗೋದಾವರ ಜಿಲ್ಲೆಯ ರೈತರಿಗೆ 2,500 ಪಂಪ್ಗಳನ್ನು ಒದಗಿಸುವ ಯೋಜನೆಯನ್ನು ಇಇಸಿಎಲ್ ಹೊಂದಿದೆ. ರೈತರಿಗೆ ಉಚಿತ ಪಂಪ್ಸೆಟ್ ನೀಡುವುದು ಮಾತ್ರವಲ್ಲದೆ ಮುಂದಿನ 5 ವರ್ಷಗಳಿಗೆ ದುರಸ್ತಿ ಮತ್ತು ನಿರ್ವಹಣೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಶಶಿಕಾಂತ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.