ಮೆಲ್ಬೋರ್ನ್: ಇತ್ತೀಚೆಗೆ ಅಂತ್ಯಗೊಂಡ ಆಸ್ಟ್ರೇಲಿಯನ್ ಗ್ರಾಂಡ್ ಸ್ಲಾಮ್ ಸೇರಿದಂತೆ ವಿಶ್ವ ಟೆನ್ನಿಸ್ನಲ್ಲಿ ವ್ಯಾಪಕವಾಗಿ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ ಎಂಬ ಆಘಾತಕಾರಿ ಅಂಶವನ್ನು ವರದಿಗಳು ಬಯಲುಮಾಡಿವೆ.
ಫಿಕ್ಸಿಂಗ್ ಘಟನೆಗಳನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ವಿಫಲಗೊಂಡಿದ್ದಾರೆ ಎಂದು ಅದು ಆರೋಪಿಸಿದೆ.
ಮೊದಲ 50 ರ್ಯಾಂಕ್ ಒಳಗಿನ 16 ಟೆನಿಸ್ ಆಟಗಾರರು ದಶಕದಿಂದ ಪಂದ್ಯಗಳನ್ನು ಸೋಲುತ್ತಿರುವ ಬಗ್ಗೆ ಅನುಮಾನಗಳಿದ್ದು, ಈ ಬಗ್ಗೆ ಟೆನ್ನಿಸ್ ಸಮಗ್ರತೆ ಘಟಕ (Tennis Integrity Unit)ಗೆ ಸೂಚಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಬಿಸಿ ಹಾಗೂ ಆನ್ಲೈನ್ ಸುದ್ದಿ ಸಂಸ್ಥೆ ಬಝ್ಫೀಡ್ ನ್ಯೂಸ್ ವರದಿ ಮಾಡಿತ್ತು. ಅಧಿಕಾರಿಗಳು ಈ ವರದಿಗಳನ್ನು ತಳ್ಳಿ ಹಾಕಿದ್ದಾರೆ.
ಕಾನೂನುಬಾಹಿರ ಚಟುವಟಿಕೆ, ಆಟಗಾರರ ಅನುಮಾನಾಸ್ಪದ ವರ್ತನೆಯ ಕುರಿತು ಮಾಹಿತಿ ದೊರೆತಿದ್ದರೂ ಕಾನೂನು ಕ್ರಮ ಕೈಗೊಳ್ಳುವ ಅಥವಾ ನಿರ್ಬಂಧ ಹೇರುವಲ್ಲಿ ಟೆನ್ನಿಸ್ ಸಮಗ್ರತೆ ಘಟಕ ವಿಫಲವಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ 8 ಆಟಗಾರರು, ಗ್ರಾಂಡ್ ಸ್ಲಾಮ್ ಪ್ರಶಸ್ತಿ ವಿಜೇತರು ಸೇರಿದಂತೆ ಎಲ್ಲಾ ಆಟಗಾರರಿಗೂ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವರದಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.