ಸಿಡ್ನಿ: ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಸ್ವಿಜರ್ಲೆಂಡ್ನ ಮಾರ್ಟಿನಾ ಹಿಂಗಿಸ್ ಜೋಡಿ ಇಲ್ಲಿನ ಸಿಡ್ನಿ ಅಂತಾರಾಷ್ಟ್ರೀಯ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಮಹಿಳಾ ಡಬಲ್ಸ್ನಲ್ಲಿ ನಿರಂತರ 29 ಪಂದ್ಯಗಳನ್ನು ಗೆಲ್ಲುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಫ್ರಾನ್ಸ್ನ ಕ್ಯಾರೋಲಿನ್ ಗಾರ್ಸಿಯಾ ಹಾಗೂ ಕ್ರಿಸ್ಟಿನಾ ಮಡೆನೋವಿಕ್ ವಿರುದ್ಧ 7-5 ಸೆಟ್ ಹಾಗೂ 10-5 ಸೂಪರ್ ಟೈ ಬ್ರೇಕ್ನೊಂದಿಗೆ ಜಯಿಸಿದ ಸಾನಿಯಾ-ಮಾರ್ಟಿನಾ ಜೋಡಿ, 2016ರಲ್ಲಿ 2 ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. 2015ರಲ್ಲಿ 7 ಪ್ರಶಸ್ತಿಗಳನ್ನು ಪಡೆದಿರುವ ಈ ಜೋಡಿ ಒಟ್ಟಾರೆ 11 ಪ್ರಶಸ್ತಿಗಳನ್ನು ಜಯಿಸಿದ ಕೀರ್ತಿ ಇವರದಾಗಿದೆ.
ಸಿಡ್ನಿ ಮಹಿಳಾ ಸೆಮಿಫೈನಲ್ನಲ್ಲಿ ಯರೊಸ್ಲಾವಾ ಶೆವೆಡೋವಾ-ಯಾರುಲಾ ಒಲಾರು ಜೋಡಿಯನ್ನು4-6, 6-3, 10-8 ಸೆಟ್ಗಳಿಂದ ಪರಾಭವಗೊಳಿಸಿ ಮಹಿಳಾ ಡಬಲ್ಸ್ನಲ್ಲಿ ನಿರಂತರ 29 ಪಂದ್ಯಗಳನ್ನು ಗೆದ್ದು ಹೊಸ ವಿಶ್ವದಾಖಲೆ ನಿರ್ಮಿಸಿದ್ದರು. ಇದು ಸಾನಿಯಾ-ಹಿಂಗಿಸ್ ಜೋಡಿಯ 30ನೇ ಗೆಲುವಾಗಿದೆ.
ಈ ಹಿಂದೆ 1994ರಲ್ಲಿ ಗೀಗಿ ಫೆರ್ನಾಂಡಿಸ್ ಹಾಗೂ ನತಾಶಾ ಜರೇವಾ ಜೋಡಿ ನಿರಂತರ 28 ಪಂದ್ಯಗಳನ್ನು ಗೆದ್ದು ದಾಖಲೆ ನಿರ್ಮಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.