ಇಸ್ಲಾಮಾಬಾದ್: ಪಠಾನ್ಕೋಟ್ ವಾಯುನೆಲೆಯ ಮೇಲೆ ನಡೆದ ಉಗ್ರರ ದಾಳಿಯ ತನಿಖೆಗೆ ಸಂಬಂಧಿಸಿದಂತೆ ಪಾಕಿಸ್ಥಾನ ಆರಂಭಿಕ ವರದಿಯನ್ನು ಭಾರತಕ್ಕೆ ನೀಡಿದ್ದು, ಉಗ್ರರು ಬಳಸಿದ್ದ ಮೊಬೈಲ್ ನಂಬರ್ ಪಾಕಿಸ್ಥಾನದಲ್ಲಿ ರಿಜಿಸ್ಟರ್ ಆಗಿಲ್ಲ ಎಂದಿದೆ.
ಪಠಾನ್ಕೋಟ್ ದಾಳಿಯ ತನಿಖೆಯನ್ನು ನಡೆಸಲು ಪ್ರಧಾನಿ ನವಾಝ್ ಶರೀಫ್ ಅವರ ನಿರ್ದೇಶನದಲ್ಲಿ ಜಂಟಿ ತನಿಖಾ ಸಮಿತಿಯನ್ನು ಪಾಕ್ ರಚಿಸಿದ್ದು, ಉಗ್ರರಿಗೂ ಪಾಕಿಸ್ಥಾನಕ್ಕೂ ಇರುವ ಸಂಬಂಧದ ಬಗ್ಗೆ ತನಿಖೆ ನಡೆಸುತ್ತಿದೆ.
ಭಾರತ ನೀಡಿರುವ ಸಾಕ್ಷ್ಯಾಧಾರಗಳ ಹಿನ್ನಲೆಯಲ್ಲಿ ಗುಪ್ತಚರ ಇಲಾಖೆಗೆ ತನಿಖೆ ನಡೆಸಲು ಶರೀಫ್ ಆದೇಶಿಸಿದ್ದು, ಇದರ ಫೈಂಡಿಗ್ಸ್ಗಳನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.