ಪುತ್ತೂರು : ಯುವಜನತೆ ದೇಶ ಪ್ರೇಮವನ್ನು ಬೆಳೆಸಿಕೊಂಡು ರಾಷ್ಟ್ರಶಕ್ತಿಯಾಗಿ ಬೆಳೆಯಬೇಕು.ದುಶ್ಚಟಗಳಿಂದ ದೂರವಿದ್ದು ದೇಶದ ಭವಿಷ್ಯದ ರೂವಾರಿಗಳಾಗಬೇಕು ಎಂದು ಪುತ್ತೂರಿನ ವೈದ್ಯ ಡಾ.ಎಂ.ಕೆ.ಪ್ರಸಾದ್ ಹೇಳಿದರು.
ಅವರು ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ದಕ್ಷಿಣ ಕನ್ನಡ ಜಿ.ಪಂ, ತಾಲೂಕು ಪಂಚಾಯತ್ ಪುತ್ತೂರು,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು, ಗ್ರಾಮ ಪಂಚಾಯತ್ ನರಿಮೊಗರು, ತಾಲೂಕು ಯುವಜನ ಒಕ್ಕೂಟ ಪುತ್ತೂರು ಹಾಗೂ ಯುವಕ ಮಂಡಲ ನರಿಮೊಗರು (ರಿ.) ಪುರುಷರ ಕಟ್ಟೆ, ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು, ನವಶಕ್ತಿ ಸ್ಪೋರ್ಟ್ಸ್ & ಆರ್ಟ್ಸ್ ಕ್ಲಬ್ ಮುಂಡೋಡಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪುತ್ತೂರು ತಾಲೂಕು ಯುವಜನ ಮೇಳ ೨೦೧೫-೧೬ರ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಮ್ಮ ದೇಶದ ಯಾವುದೇ ಮೂಲೆಯ ಪ್ರಜೆಯನ್ನು ಕೂಡ ಪ್ರೀತಿಸಬೇಕು.ಪ್ರಾದೇಶಿಕವಾಗಿ ಬೇರೆ ಬೇರೆ ವೈವಿದ್ಯತೆಗಳಿದ್ದರೂ ರಾಷ್ಟ್ರದ ಐಳಿಗೆಗಾಗಿ ಏಕತೆಯನ್ನು ಬೆಳೆಸಬೇಕೆಂದರು.ಪುತ್ತೂರು ತಾ.ಪಂ.ಉಪಾಧ್ಯಕ್ಷ ದಿನೇಶ್ ಮೆದು ಮಾತನಾಡಿ,ದಾರಿತಪ್ಪುತ್ತಿರುವ ಯುವಜನತೆಯನ್ನು ಸರಿದಾರಿಗೆ ತರುವಲ್ಲಿ ಯುವಜನಮೇಳ ಪೂರಕ ವಾತಾವರಣ ಕಲ್ಪಿಸುತ್ತದೆ ಎಂದರು.
ಸಾಂದೀಪನಿ ಗ್ರಾಮೀಣ ಶಿಕ್ಷಣ ಸಂಸ್ಥೆಗಳ ಸಂಚಾಲಕ ಬಾಸ್ಕರ್ ಆಚಾರ್ ಹಿಂದಾರು ಮಾತನಾಡಿ,ಯುವಜನ ಮೇಳ ಯಶಸ್ವಿಯಾಗಿ ಸಂಸ್ಥೆಯಲ್ಲಿ ನಡೆದಿದ್ದು ಇದು ನಮ್ಮ ಕೀರ್ತಿಯನ್ನು ಹೆಚ್ಚಿಸಿದೆ.
ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ, ತಾಲೂಕಿನಲ್ಲಿರುವ ಎಲ್ಲಾ ಯುವಕಮಂಡಲಗಳನ್ನು ಒಗ್ಗೂಡಿಸುವಲ್ಲಿ ಯುವಜನ ಮೇಳ ಯಶಸ್ವಿಯಾಗಿದೆ. ಯುವಜನ ಮೇಳದ ಇತಿಹಾಸದಲ್ಲಿ ಮೊದಲ ಬಾರಿಗೆ ಗರಿಷ್ಟ ಸಂಖ್ಯೆಯ ತಂಡಗಳು ಬಾಗವಹಿಸುವಂತೆ ಮಾಡಿದ್ದು ಯುವಜನ ಮೇಳ ಸಮಿತಿಯ ಹೆಗ್ಗಳಿಕೆ. ತಾಲೂಕಿನಲ್ಲಿ ಇನ್ನಷ್ಟು ಯುವಕ ಮಂಡಲಗಳನ್ನು ಕ್ರಿಯಾಶೀಲವಾಗಿಸುವ ನಿಟ್ಟಿನಲ್ಲಿ ಒಕ್ಕೂಟ ಶ್ರಮಿಸಲಿದೆ ಎಂದರು.
ಯುವಜನ ಮೇಳ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಮಾತನಾಡಿ,ಸಾಂಘಿಕ ಶಕ್ತಿಯಿಂದ ಯುವಜನ ಮೇಳ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ದೇಶದಲ್ಲಿ ಸಾಮಾಜಿಕ ಭದ್ರತೆ ಉಳಿಯಬೇಕಾದರೆ ಯುವಶಕ್ತಿ ಒಂದಾಗಬೇಕು. ಕನಸಿನ ಭಾರತ-೨೦೨೦ರಲ್ಲಿ ಬಲಿಷ್ಠ ರಾಷ್ಟ್ರವಾಗುವ ನಿಟ್ಟಿನಲ್ಲಿ ಯುವಜನತೆ ಶ್ರಮಿಸಬೇಕೆಂದರು.
ವೇದಿಕೆಯಲ್ಲಿ ಜಿ.ಪಂ.ಸದಸ್ಯ ಕೇಶವ ಗೌಡ ಬಜತ್ತೂರು, ಯುವಜನ ಮೇಳ ಸಮಿತಿ ಆರ್ಥಿಕ ಸಮಿತಿ ಸಂಚಾಲಕಿ, ತಾ.ಪಂ.ಸದಸ್ಯೆ ಯಶೋಧಾ ಕೆ.ಗೌಡ, ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಮಾಧವ ಬಿ.ಕೆ , ನರಿಮೊಗರು ಗ್ರಾ.ಪಂ.ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು, ಯುವಜನ ಮೇಳ ಸಮಿತಿ ಕಾರ್ಯದರ್ಶಿ ಸುಧಾಕರ ಕುಲಾಲ್, ಮುಂಡೋಡಿ ನವಶಕ್ತಿ ಸ್ಪೋರ್ಟ್ಸ್ & ಆರ್ಟ್ಸ್ ಕ್ಲಬ್ನ ಅಧ್ಯಕ್ಷ ದೇವರಾಜ್ ಕಲ್ಕಾರು, ಸಾಂದೀಪನಿ ವಿದ್ಯಾ ಸಂಸ್ಥೆಯ ಮುಖ್ಯಗುರು ಜಯಮಾಲ ವಿ.ಎನ್,ಪ್ರಖ್ಯಾತಿ ಯುವತಿ ಮಂಡಲದ ಅಧ್ಯಕ್ಷೆ ಗುರುಪ್ರಿಯಾ ನಾಯಕ್, ಕಾರ್ಯದರ್ಶಿ ಶ್ವೇತಾ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪ್ರಖ್ಯಾತಿ ಯುವತಿ ಮಂಡಲದ ವತಿಯಿಂದ ತಂಡದ ಬೆಳವಣಿಗೆಗೆ ಸಹಕರಿಸಿದ ಸುಧಾಕರ ಕುಲಾಲ್, ವಿದ್ಯಾ ನಾಗೇಶ್ ದಂಪತಿಗಳನ್ನು ಗೌರವಿಸಲಾಯಿತು.ನರಿಮೊಗರು ಯುವಕ ಮಂಡಲದ ವತಿಯಿಂದ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಮಾಧವ ಬಿ.ಕೆ ಹಾಗೂ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಇವರನ್ನು ಗೌರವಿಸಲಾಯಿತು.
ಸಂತೋಷ್ ರೈ ಮುಕ್ವೆ, ಶಿವಪ್ರಸಾದ್ ಉಪ್ಪಳ, ಹರೀಶ್ಚಂದ್ರ ಶಿಬರ, ರಾಜೇಶ್ ಮುಕ್ವೆ, ಗಿರೀಶ್ ಕೂಡುರಸ್ತೆ, ವಿಶ್ವನಾಥ ಬಲ್ಯಾಯ, ಪ್ರಭಾಕರ ಕೆದ್ಕಾರು, ಆಶಾಲತಾ ,ಗಣೇಶ್ ಶೆಟ್ಟಿ ಶಿಬರ ಅತಿಥಿಗಳನ್ನು ಗೌರವಿಸಿದರು. ಕಾಣಿಯೂರು ಲಕ್ಷ್ಮೀ ನರಸಿಂಹ ಯುವಕ ಮಂಡಲದ ಸುರೇಶ್ ಓಡಬಾಯಿ, ಕುಮಾರಮಂಗಲ ಅರ್ಪಿತಾ ಯುವತಿ ಮಂಡಲದ ಶೇಷಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.
ಸಮಾರೋಪ ಸಮಾರಂಭದ ಮುನ್ನ ಶಾಸಕಿ ಶಕುಂತಳಾ.ಟಿ.ಶೆಟ್ಟಿ, ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪ, ಸದಸ್ಯೆ ಪುಷ್ಪಾವತಿ ಕಳುವಾಜೆ ಆಗಮಿಸಿ ತೆರಳಿದರು.
ಸ್ವಾಗತ ಸಮಿತಿ ಸದಸ್ಯ ನವೀನ್ ರೈ ಶಿಬರ ಸ್ವಾಗತಿಸಿ,ಪ್ರಚಾರ ಸಮಿತಿ ಸಂಚಾಲಕ ನವೀನ್ ರೈ ಪಂಜಳ ವಂದಿಸಿದರು.ಜಿಲ್ಲಾ ಯುವಜನ ಒಕ್ಕೂಟದ ನಿರ್ದೇಶಕ ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.