ಬೆಂಗಳೂರು : ಉಪಲೋಕಾಯುಕ್ತ ನ್ಯಾ. ಸುಭಾಷ್.ಬಿ ಅಡಿ ಕಾರ್ಯ ನಿರ್ವಹಿಸಬಹುದೆಂದು ಹೈಕೋರ್ಟ್ ಏಕ ಸದಸ್ಯ ಪೀಠ ಆದೇಶಿಸಿದೆ. ಉಪಲೋಕಾಯುಕ್ತ ಸುಭಾಷ್.ಬಿ ಅಡಿಯವರು ರಾಜ್ಯ ಸರಕಾರದ ಪದಚ್ಯುತಿ ನಿರ್ಣಯದ ವಿರುದ್ಧ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ನ್ಯಾ. ಸುಭಾಷ್.ಬಿ ಅಡಿ ಪರವಾಗಿ ಬಿ.ವಿ ಆಚಾರ್ಯ ವಾದ ಮಂಡಿಸಿದರು. ಈ ಸಂದರ್ಭ ನ್ಯಾಯಮೂರ್ತಿ ಬೈರಾ ರೆಡ್ಡಿ ಯವರು ಸ್ಪೀಕರ್ ಕಚೇರಿ ಹೊರಡಿಸಿರುವ ಪತ್ರ ವಾಪಸ್ ಪಡೆಯಲು ಸಾಧ್ಯವಿದೆಯೇ ಎಂದು ಎಂ.ಆರ್ ನಾಯ್ಕ ಅವರನ್ನು ಪ್ರಶ್ನಿಸಿದರಲ್ಲದೇ ಸ್ಪೀಕರ್ ಕಾರ್ಯದರ್ಶಿ ಅವರ ಹೇಳಿಕೆ ದಾಖಲಿಸಿಕೊಂಡರು. ಅಲ್ಲದೇ ಜನವರಿ 2 ವಾರಕ್ಕೆ ವಿಚಾರಣೆ ಮುಂದೂಡಲಾಯಿತು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.