ಪುತ್ತೂರು : ಪಕ್ಷದ ನಿಷ್ಟಾವಂತ ಕಾರ್ಯಕರ್ತರ ಬೆಂಬಲ ಹಾಗೂ ಒತ್ತಾಯದಿಂದ ಚುನಾವಣೆಯಲ್ಲಿ ಸ್ಫರ್ಧಿಸಿದ್ದು ಗೆಲುವಿನ ಭರವಸೆಯಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಈ ಹಿಂದಿನ ಚುನಾವಣೆಯ ಸೋಲು- ಗೆಲುವು ಎರಡೂ ಸಂದರ್ಭದಲ್ಲೂ ಜನರ ಕಷ್ಟಗಳಿಗೆ ಸ್ಪಂದಿಸಿದ್ದೇನೆ. ಆದ್ದರಿಂದ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ಪಡೆಯುವುದು ನಿಶ್ಚಿತ ಎಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಹೇಳಿದರು.
ಅವರು ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಅವಿಭಜಿತ ಜಿಲ್ಲೆಯ ಉಸ್ತುವಾರಿ ಸಚಿವನಾಗಿ, ಲೋಕಸಭಾ ಸದಸ್ಯನಾಗಿ ಕೆಲಸ ಮಾಡಿzನೆ. ಎಲ್ಲಾ ಪಂಚಾಯತ್ಗಳನ್ನೂ ಹತ್ತಿರದಿಂದ ಕಂಡಿzನೆ. ಬಳಿಕವೂ ಜನರ ನೇರ ಸಂಪರ್ಕದಲ್ಲಿzನೆ. ಅಡಕೆ ಬೆಲೆ, ಮೀನುಗಾರರ ಸಮಸ್ಯೆ, ಸ್ಥಳೀಯ ಜನಪ್ರತಿನಿಧಿಗಳ ಸಮಸ್ಯೆಗೆ ಪರಿಹಾರ ನೀಡಲು ಶ್ರಮಿಸಿದ್ದೇನೆ. ಪಂಚಾಯತ್ರಾಜ್ ವ್ಯವಸ್ಥೆಯ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ರಮೇಶ್ ಕುಮಾರ್ ವರದಿಯ ಜಾರಿಗೆ ಒತ್ತಾಯಿಸಿದ್ದೇನೆ. ಆದ್ದರಿಂದ ಕಾರ್ಯಕರ್ತರ, ಸ್ಥಳೀಯ ಸಂಸ್ಥೆ ಜನಪ್ರತಿನಿಧಿಗಳ ಧ್ವನಿಯಾಗಿ ವಿಧಾನ ಪರಿಷತ್ ಚುನಾವಣೆ ಎದುರಿಸುತ್ತೇನೆ ಎಂದು ಹೇಳಿದರು.
ಚುನಾವಣೆಯಲ್ಲಿ ಆಸಕ್ತಿ ಇಲ್ಲ ಎಂದವರಿಗೆ ಪಕ್ಷ ಅವಕಾಶ ನೀಡುವ ಅಗತ್ಯ ಇರಲಿಲ್ಲ. ಆಸಕ್ತಿ ಇರುವ ಹಲವಾರು ಮಂದಿ ಕಾಂಗ್ರೆಸ್ನ ಚುನಾವಣಾ ಪ್ರಕ್ರಿಯೆಯ ಸಭೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಹಾಕಿದವರನ್ನು ಕರೆದು ಚರ್ಚಿಸಬೇಕಾಗಿತ್ತು. ಅರ್ಜಿ ಸಲ್ಲಿಸಿದ ಇತರರಿಗೆ ಅವಕಾಶ ನೀಡುತ್ತಿದ್ದರೆ, ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೆ. ತನಗೆ ಅವಕಾಶ ನೀಡಲೇಬೇಕೆಂದು ಹಠ ಮಾಡುತ್ತಿರಲಿಲ್ಲ. ಒತ್ತಾಯಪೂರ್ವಕ ಕಣಕ್ಕೆ ಇಳಿಸುವ ಬದಲು, ಆಸಕ್ತರಿಗೆ ಅವಕಾಶ ನೀಡಬೇಕು.ಹೀಗಾಗಿಯೇ ಕಾರ್ಯಕರ್ತರು ನನಗೆ ಒತ್ತಾಯ ಮಾಡಿದ್ದರು ಎಂದರು.ನಾನು ಗೆದ್ದಾಗಲೂ ಕೆಲಸ ಮಾಡಿದ್ದೇನೆ ಸೋತಾಗಲೂ ಕೆಲಸ ಮಾಡಿದ್ದೇನೆ ಎಂದರು.
ಸುದ್ದಿಗೋಷ್ಟಿಯಲ್ಲಿ ಚೆರ್ಕಾಡಿ ಗ್ರಾ.ಪಂ ಅಧ್ಯಕ್ಷ ಹರೀಶ್, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಜೇಶ್, ಪೃಥ್ವಿರಾಜ್, ಅಬ್ದುಲ್ಸಾಹೇಬ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.