ಕಾಸರಗೋಡು : ವಿಶೇಷ ಚೇತನರಲ್ಲಿರುವ ಉತ್ತಮ ಗುಣಗಳನ್ನೂ ಪ್ರತಿಭೆಗಳನ್ನೂ ಗುರುತಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕಷ್ಟೆ ಹೊರತು ಅಂತಹ ಮಕ್ಕಳು ನಮ್ಮ ಮನೆಯಲ್ಲಾಗಲಿ ಊರಿನಲ್ಲಾಗಲೀ ಇದ್ದಾರಲ್ಲಾ ಎಂದು ಕೊರಗುವುದು ಸರಿಯಲ್ಲ. ಅವರಿಗೆ ಸಾಧನೆಯ ಹಾದಿ ತೆರೆದು ಕೊಡುವುದು ನಮ್ಮ ಕರ್ತವ್ಯ ಎಂದು ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ ಕೆ ಎನ್ ಕೃಷ್ಣ ಭಟ್ ನುಡಿದರು.
ಅವರು ಬದಿಯಡ್ಕದಲ್ಲಿರುವು ಕುಂಬಳೆ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ನಡೆದ ವಿಶೇಷ ಚೇತನರ ದಿನಾಚರಣೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಕೊನೆಯಲ್ಲಿ ಆಯ್ದ ಮಕ್ಕಳಿಗೆ ಗಾಲಿ ಕುರ್ಚಿ, ಎಫ್ ಒ, ಕನ್ನಡಕ ಇತ್ಯಾದಿಗಳನ್ನು ವಿತರಿಸಿದರು. ಬದಿಯಡ್ಕ ಗ್ರಾಮ ಪಂಚಾಯತಿನ ಉಪಾಧ್ಯಕ್ಷೆ ಝೈನಬ ಮೊಯ್ದೀನ್ ಕುಟ್ಟಿ ಅಧ್ಯಕ್ಷತೆ ವಹಿಸಿದರು.
ಪೆರಡಾಲ ಜಿಬಿಯುಪಿ ಶಾಲೆ ಮುಖ್ಯೋಪಾಧ್ಯಾಯ ಗುರುಮೂರ್ತಿ, ಅದೇ ಶಾಲೆಯ ಅಧ್ಯಾಪಕ ಆ ದಿನ ಮಕ್ಕಳಿಗೆ ಮತ್ತು ಅವರ ಹೆತ್ತವರಿಗೆ ನಡೆಸಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ಪ್ರಾಯೋಜಿಸಿದ ಸೋಮನಾಥನ್ , ಕ್ಷೇತ್ರ ಸಂಪನ್ಮೂಲ ಕೇಂದ್ರದ ಕಾರ್ಯಕ್ರಮ ನಿರ್ವಹಣಾಧಿಕಾರಿ ಯೂಸುಫ್ ಕೊಟ್ಯಾಡಿ ಮೊದಲಾದವರು ಉಪಸ್ಥಿತರಿದ್ದರು.
ತರಬೇತುದಾರರಾದ ಕಾರ್ಮೆಲಿ ಟೀಚರ್ ಸ್ವಾಗತಿಸಿ ವಿಶೇಷ ಪರಿಗಣನೆ ಅಗತ್ಯವಿರುವ ಮಕ್ಕಳ ವಿಷಯಗಳ ಸಂಪನ್ಮೂಲ ವ್ಯಕ್ತಿ ಲಕ್ಷ್ಮೀಪ್ರಿಯ ವಂದಿಸಿದರು. ಬೆಳಗ್ಗೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಕೈಲಾಸಮೂರ್ತಿ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.