ಬೆಳ್ತಂಗಡಿ : ಹಲವಾರು ವರ್ಷಗಳಿಂದ ರಾಜಕೀಯ ಕ್ಷೇತ್ರದಲ್ಲಿದ್ದು ಸಾಮಾಜಿಕ ಕಾರ್ಯಗಳಿಗೆ ದುಡಿದಿದ್ದೇನೆ. ಹೀಗಾಗಿ ಮುಂದಿನ ವಿಧಾನಪರಿಷತ್ ಚುನಾವಣೆಯಲ್ಲಿ ಎರಡನೇ ಪ್ರಾಶಸ್ತ್ಯದ ಮತವನ್ನು ನೀಡಿ ಗೆಲ್ಲಿಸಬೇಕೆಂದು ಜಾತ್ಯಾತೀತ ಜನತಾ ದಳದ ಅಭ್ಯರ್ಥಿ ಪ್ರವೀಣ ಚಂದ್ರ ವಿನಂತಿಸಿಕೊಂಡಿದ್ದಾರೆ.
ಅವರು ಶುಕ್ರವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯ ಮೂಲಕ ಸ್ಥಳೀಯ ಸಂಸ್ಥೆಗಳ ಮತದಾರರಲ್ಲಿ ಮತ ನೀಡುವಂತೆ ಮನವಿ ಮಾಡಿಕೊಂಡರು.
ದ.ಕ.ಜಿಲ್ಲೆಯಲ್ಲಿ ಇಬ್ಬರ ಆಯ್ಕೆ ಆಗಬೇಕಿದ್ದರೂ ಬಿಜೆಪಿ ಮತ್ತು ಕಾಂಗ್ರೇಸ್ ಪಕ್ಷವು ಕೇವಲ ಒಂದು ಅಭ್ಯರ್ಥಿಯನ್ನು ಚುನಾವಣಾ ಕಣಕ್ಕೆ ಇಳಿಸಿದೆ. ಈ ಸಂದರ್ಭದಲ್ಲಿ ಆ ಎರಡೂ ಪಕ್ಷಗಳ ಮತದಾರರು ತಮ್ಮ ಹೆಚ್ಚುವರಿ ಮತವನ್ನು ಅಂದರೆ 2 ನೇ ಪ್ರಾಶಸ್ತ್ಯದ ಮತವನ್ನು ತನಗೇ ನೀಡುವಂತೆ ಅವರು ಕೇಳಿಕೊಂಡರು.
ಈ ಚುನಾವಣೆಯಲ್ಲಿ ಎರಡು ಮತಗಳನ್ನು ನೀಡುವ ಹಕ್ಕು ಮತದಾರರಿಗಿದೆ. ಅದನ್ನು ಮೊಟಕುಗೊಳಿಸದೆ, ಕಳೆದುಕೊಳ್ಳದೆ 2 ನೇ ಪ್ರಾಶಸ್ತ್ಯದ ಮತವನ್ನು ಚಲಾಯಿಸಿ ತಮ್ಮ ಹಕ್ಕನ್ನು ಪೂರ್ಣರೂಪವಾಗಿ ಚಲಾಯಿಸುವ ಅಗತ್ಯವಿದೆ. ಪಕ್ಷೇತರ ಬಂಧುಗಳಿಗೆ ತಮ್ಮ ಮತವನ್ನು ಚಲಾಯಿಸಲು ಯಾವುದೇ ರೀತಿಯ ನಿರ್ಬಂಧಗಳಿರುವುದಿಲ್ಲ. ಹೀಗಾಗಿ ಅವರು ತಮ್ಮ ಮೊದಲ ಪ್ರಾಶಸ್ತ್ಯದ ಮತಗಳನ್ನು ನೀಡುವಂತೆ ಮನವಿ ಮಾಡಿದರು.
ಈ ಮೊದಲು ಆಯ್ಕೆಯಾದವರಿಂದ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ರೀತಿಯ ಕೆಲಸಗಳು ನಮ್ಮ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಗೆ ಆಗಿಲ್ಲ. ಅದಕ್ಕಾಗಿ ಕಾರ್ಯೋತ್ಸಾಹವಿರುವ ವಿಧಾನ ಪರಿಷತ್ತಿಗೆ ಕಳಿಸುವುದು ಅಗತ್ಯವಿದೆ. ಹೀಗಾಗಿ ನನ್ನನ್ನು ಆಯ್ಕೆ ಮಾಡಬೇಕೆಂದು ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಸಿಂಧೂ ದೇವಿ, ತಾಲೂಕು ಪ್ರಧಾನ ಕಾರ್ಯದರ್ಶಿ ರಾಮಾಚಾರಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.