ಬೆಳ್ತಂಗಡಿ : ರಾಜ್ಯದಲ್ಲಿ ಶ್ರೀ ಸಾಮಾನ್ಯನ ಬದುಕು ಹೈರಾಣಾಗುತ್ತಿದೆ. ಅದರ ಬಗ್ಗೆ ಚಿಂತಿಸುವುದು ಬಿಟ್ಟು ಜ್ಯೋತಿಷ್ಯ ಶಾಸ್ತ್ರವನ್ನು ನಿಷೇಧಿಸುವ, ಟಿಪ್ಪು ಜಯಂತಿಯಂತಹ ಕಾರ್ಯಕ್ರಮಗಳನ್ನು ಮಾಡಿಗೊಂದಲವನ್ನುಂಟು ಮಾಡುವುದರಲ್ಲೇ ಸರಕಾರ ನಿರತವಾಗಿದೆ. ಸರಕಾರ ವರ್ತಮಾನದ ಆಡಳಿತ ವೈಪರಿತ್ಯಗಳಿಂದಾಗಿ ಭವಿಷ್ಯದ ಬದುಕು ನಿರಾಶೆಗೆಕಾರಣವಾಗುತ್ತಿದೆ. ಈ ರೀತಿಯಲ್ಲಿ ಸರಕಾರ ಮುಂದುವರಿದರೆ ಜನತೆ ಕಾಂಗ್ರೇಸ್ನ್ನು ನಿರ್ಮೂಲ ಮಾಡುವ ದಿನಗಳು ದೂರವಿಲ್ಲ ಎಂದು ಬಿಜೆಪಿ ದ.ಕ.ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್ ತಿಳಿಸಿದ್ದಾರೆ.
ರಾಜ್ಯದ ಆಡಳಿತವನ್ನು ಗಮನಿಸಿದಾಗ ರಾಜ್ಯದ ಕಾಂಗ್ರೇಸ್ ನೇತೃತ್ವದ ಸರಕಾರದಿಂದ ಜನಪರ ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸುವುದೇ ದೊಡ್ಡ ಮೂಢನಂಬಿಕೆಯಾಗಿದೆ. ರೈತರ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಲೇ ಇದೆ. ಕಾನೂನು ವ್ಯವಸ್ಥೆ ಕುಸಿದಿದೆ. ವಿದ್ಯುತ್ ಕೊರತೆಯನ್ನು ಜನ ಅನುಭವಿಸುತ್ತಿದ್ದಾರೆ. ಈ ಎಲ್ಲಾ ಅವ್ಯವಸ್ಥೆಗಳಿಂದ ಜನರಲ್ಲಿ ಅಭದ್ರತೆಯ ಭಾವನೆ ಮೂಡಿದೆ. ಅಭಿವೃದ್ದಿ ಕಾರ್ಯಗಳನ್ನು ಮಾಡುವುದು ಬಿಟ್ಟು ಜ್ಯೋತಿಷ ನಿರ್ಮೂಲನೆ, ರಾಶಿ ಭವಿಷ್ಯ ನಿಷೇಧಕ್ಕೆ ಸರಕಾರ ಹೊರಟಿದೆ.
ಜನರಿಗೆ ಬೇಕಾಗಿರುವುದು ಮೂಲಭೂತ ಸೌಕರ್ಯಗಳು. ಅದರ ಬಗ್ಗೆ ಸರಕಾರಕ್ಕೆ ಚಿಂತೆಯೇ ಇಲ್ಲವಾಗಿದೆ. ಆಡಳಿತದ ಅವ್ಯವಸ್ಥೆ ಒಂದೆಡೆಯಾದರೆ ಇನ್ನೊಂದೆಡೆ ಪಕ್ಷದ ಆಂತರಿಕ ಭಿನ್ನಮತದಿಂದಾಗಿ ಪಕ್ಷದಲ್ಲಿ ಬಂಡಾಯದ ಬಾವುಟ ಹಾರುತ್ತಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಕಾಂಗ್ರೇಸ್ ನಿರ್ಮೂಲನಕ್ಕೆ ಕಾಯುವಂತಾಗಿದೆ. ಪರಿಸ್ಥಿತಿ ಈ ರೀತಿ ಮುಂದುವರಿದರೆ ಮುಂದಿನ ಚುನಾವಣೆಯಲ್ಲಿ ಪಕ್ಷದ ವಿನಾಶಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಕಾರಣವಾಗುವುದರಲ್ಲಿ ಸಂಶಯವಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.