ಬೆಳ್ತಂಗಡಿ : ಕೃಷಿಕರ, ಉದ್ಯಮಿಗಳ, ಮಹಿಳೆಯರ, ಮಕ್ಕಳ, ಯುವಕ, ಯುವತಿಯರಒಟ್ಟಾರೆ ಅಬಾಲ ವೃದ್ಧಾರಾದಿಯಾಗಿ ಆಕರ್ಷಣೆಯ ಕೇಂದ್ರವಾಗಿ ಪರಿವರ್ತಿತವಾಗಿದೆ ರಾಜ್ಯ ಮಟ್ಟದ 38 ನೇ ವಸ್ತುಪ್ರದರ್ಶನ. ಕಾರ್ತಿಕ ಮಾಸದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂಭ್ರಮ. ಈ ಸಂದರ್ಭ ಬರುವ ಭಕ್ತ ಸಂದೋಹವುಕ್ಷೇತ್ರಕ್ಕೆ ಬಂದು ಸುಮ್ಮನೆತಿರುಗಾಡಿಕೊಂಡು ಹೋಗಬಾರದು, ಏನಾದರೂ ಹೊಸ ಮಾಹಿತಿಗಳನ್ನು ತಲೆಯಲ್ಲಿತುಂಬಿಕೊಂಡು, ಮನೆಯಲ್ಲಿ ಮೆಲುಕು ಹಾಕಬೇಕು ಎಂದು ಸದುದ್ದೇಶದಿಂದ 37 ವರ್ಷಗಳ ಹಿಂದೆ ಹೆಗ್ಗಡೆಯವರು ವಸ್ತು ಪ್ರದರ್ಶನವನ್ನು ಆರಂಭಿಸಿದ್ದರು.
ಈ ಪ್ರದರ್ಶನಕ್ಕೆ ಈ ಭಾರಿ ಮೂವತ್ತೆಂಟರ ಹರಯ.ಸುಮಾರು 10 ವರ್ಷಗಳ ಹಿಂದೆಪುಸ್ತಕ, ಆಟಿಕೆ, ಬಟ್ಟೆ, ತಿಂಡಿ,ತಿನಸು ಇತ್ಯಾದಿಗಳಿಗೆ ಮಾತ್ರ ಸೀಮಿತವಾಗಿದ್ದ ಪ್ರದರ್ಶನ ಇದೀಗ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಂಡು ಜನಾಕರ್ಷಣೆಯಕೇಂದ್ರವಾಗಿ ಪರಿವರ್ತಿತವಾಗಿದೆ.ಗುಡಿಕೈಗಾರಿಕಾ ವಸ್ತುಗಳಿಂದ ಹಿಡಿದು ವಾಹನೋದ್ಯಮದ ಮಳಿಗೆಗಳೂ, ವೈಜ್ಞಾನಿಕ ಆವಿಷ್ಕಾರಗಳುಇತ್ತೀಚಿನ ವರ್ಷಗಳಲ್ಲಿ ಪ್ರದರ್ಶನಗೊಳ್ಳುತ್ತಿವೆ.
ಈ ಬಾರಿ 195 ಮಳಿಗೆಗಳು ಇದ್ದುಎಲ್ಲವೂಜನರತ್ತ ಸೆಳೆಯುತ್ತಿವೆ. ಎಲ್.ಐ.ಸಿ.,ಕರ್ನಾಟಕ, ಸಿಂಡಿಕೇಟ್, ಕೆನರಾ ಹಾಗೂ ಕಾರ್ಪೋರೇಶನ್ ಬ್ಯಾಂಕ್ಗಳ ಮಳಿಗೆಗಳಿದ್ದು ಅದರ ಸಿಬ್ಬಂದಿಗಳು ಕೇಂದ್ರ ಸರಕಾರದ ಇತ್ತೀಚಿನ ಯೋಜನೆಗಳನ್ನು ಜನರಿಗೆ ಪರಿಚಯಿಸಲು ಮತ್ತು ಅದರಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸುತ್ತಿದ್ದಾರೆ. ಸರಕಾರದ ಕೃಷಿ, ತೋಟಗಾರಿಕೆ, ರೇಷ್ಮೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅರಣ್ಯ, ಪಶುಸಂಗೋಪನೆ, ಆರೋಗ್ಯ, ಶಿಕ್ಷಣ ಇಲಾಖೆಗಳು, ಕೆ.ಎಂ.ಎಫ್, ಅಂಚೆ ಹಾಗೂ ಸ್ಕ್ಯಾಡ್ಸ್ಸಂಸ್ಥೆಗಳ ಮಳಿಗೆಗಳು ಸಮಗ್ರ ಮಾಹಿತಿ, ಸಮಸ್ಯೆಗಳ ನಿವಾರಣೆಗೆ ಸಿದ್ದವಾಗಿದೆ.
ಹಿಂದೆಲ್ಲಾ ಪ್ರದರ್ಶನಕ್ಕೆ ಕಾರುಗಳು ಪ್ರವೇಶ ಮಾಡುತ್ತಿರಲಿಲ್ಲ.ಇತ್ತೀಚಿನ ನಾಲ್ಕೈದು ವರ್ಷಗಳಿಂದ ಹೊಂಡ ಮ್ಯಾಟ್ರಿಕ್ಸ್, ಭಾರತ್ ಅಟೋಕಾರ್ಸ್, ಹುಂಡೈ ಕಾರುಗಳು, ಹೀರೋ ದ್ವಿಚಕ್ರವಾಹನಗಳು ಕಾಣಸಿಗುತ್ತಿವೆ. ಶ್ರೀ ಕ್ಷೇತ್ರದಿಂದ ನಡೆಸಲ್ಪಡುವ ರುಡ್ಸೆಟ್ ಬಜಾರ್, ಎಸ್.ಡಿ.ಎಂ.ಇ.ಟ್ರಸ್ಟ್, ಐಟಿಐ ವೇಣೂರು, ಗ್ರಾಮಾಭಿವೃದ್ಧಿಯೋಜನೆ, ರತ್ನ ಮಾನಸ, ಮಂಜುವಾಣಿ, ನಿರಂತರ ಪತ್ರಿಕೆ, ಯೋಗ ಮತ್ತು ಪ್ರಕೃತಿಚಿಕಿತ್ಸೆ, ಧರ್ಮೋತ್ಥಾನ ಟ್ರಸ್ಟ್, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಸಿದ್ದವನ ನರ್ಸರಿ, ಧ.ಮ.ಪಾಲಿಟೆಕ್ನಿಕ್ಗಳು ಕಾರ್ಯವೈಖರಿಯನ್ನು ಪ್ರದರ್ಶಿಸಿದರೆ ಸೆಲ್ಕೋ ಫೌಂಡೇಶನ್, ಸೋಲಾರ್ ಸಿಸ್ಟಮ್ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ಸಮರ್ಥವಾಗಿವೆ.
ಕೇವಲ ಪ್ರದರ್ಶನ ಮಾಹಿತಿಗಳ ಜೊತೆಗೆ ಹಲವಾರು ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಮಾರಾಟಕ್ಕೆಇಟ್ಟು ಪ್ರದರ್ಶನಕ್ಕೆ ಹೆಚ್ಚಿನ ಮೆರುಗನ್ನು ನೀಡಿವೆ. ಹಾಲು ಕರೆಯುವಯಂತ್ರ, ರಬ್ಬರ್ ಉತ್ಪನ್ನಗಳು, ಕೃಷಿ ಯಂತ್ರೋಪಕರಣಗಳು, ಆಯುರ್ವೇದಿಕ್, ಅಗರಬತ್ತಿ, ಅಲ್ಯುಮಿನಿಯಂ ಲ್ಯಾಡರ್, ಪುಸ್ತಕಗಳು, ಗೊಂಬೆಗಳು, ಸಾವಯವ ಉತ್ಪನ್ನಗಳು, ಫ್ಯಾನ್ಸಿ, ಅಡುಗೆ ವಸ್ತುಗಳು, ರೋಟಿ ಮೇಕರ್, ವಾಚ್ಗಳು, ಆಹಾರ ಸಂರಕ್ಷಣೆ, ಒಂದುಗ್ರಾಂಗೋಲ್ಡ್, ಬಳೆ, ಸಿಡಿ, ವಿವಿಧ ವಿನ್ಯಾಸದ ಬಟ್ಟೆಗಳು, ಚೀಲಗಳು, ತರಕಾರಿ ಬೀಜಗಳು, ಹೊಲಿಗೆ ಯಂತ್ರ, ಹೊಸ ಮಾದರಿ ಚಪ್ಪಲಿಗಳು, ಗೊಬ್ಬರ, ಒಣ ಹಣ್ಣುಗಳು, ಕಂಪ್ಯೂಟರ್ಜಾತಕ, ಮರದ ಕುಶಲ ವಸ್ತುಗಳು, ಎಲ್ಇಡಿ ಬಲ್ಬ್, ಹನಿ ನೀರಾವರಿ ಸಲಕರಣೆಗಳು, ಪಶು ಆಹಾರಗಳು, ಕ್ಯಾಂಪ್ಕೋ ಉತ್ಪನ್ನಗಳು ಶ್ರೀಸಾಮಾನ್ಯನ ಮನವನ್ನುಗೆಲ್ಲುವ ಪ್ರಯತ್ನ ನಡೆಸುತ್ತಿವೆ.
ಒಟ್ಟಾರೆ ಹಿರಿಕಿರಿಯ ಎಂಬ ಭೇದವಿಲ್ಲದೆಉಚಿತ ಪ್ರವೇಶವಿರುವ ದೀಪೋತ್ಸವ ವಸ್ತು ಪ್ರದರ್ಶನ ಲಕ್ಷಾಂತರಜನರ ಮನಸ್ಸಾನ್ನಾಕರ್ಷಿಸುವಲ್ಲಿ ಸಫಲವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.