ಪುತ್ತೂರು : ಬಿಳಿನೆಲೆ ಶಾಲೆಯ ಮಧ್ಯಾಹ್ನ ಊಟದಲ್ಲಿ ಉಳಿಕೆಯಾದ ತ್ಯಾಜ್ಯ ವಸ್ತುಗಳನ್ನು ಬಯೋ ಗ್ಯಾಸ್ ತಯಾರಿ ಮಾಡುವ ಘಟಕ ಇತ್ತೀಚೆಗೆ ಉದ್ಘಾಟನೆಗೊಂಡಿತು.
ಬಿಳಿನೆಲೆ ಕೈಕಂಬದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಜಿಲ್ಲಾ ಪಂಚಾಯತ್ ವಿಶೇಷ ಯೋಜನೆಯಲ್ಲಿ ಬಿಳಿನೆಲೆ ಗ್ರಾಮ ಪಂಚಾಯತ್ ಮೂಲಕ ಈ ಶಾಲೆಗೆ ಬಯೋಗ್ಯಾಸ್ ಘಟಕ ಮಂಜೂರಾಗಿದ್ದು, ಇದೀಗ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.72 ವಿದ್ಯಾರ್ಥಿಗಳಿರುವ ತರಕಾರಿಯ ಉಳಿಕೆ ಭಾಗ, ಅನ್ನ ಬಸಿದ ನೀರು , ಅನ್ನದ ಉಳಿಕೆ ಸೇರಿದಂತೆ ಕೊಳೆಯುವ ಎಲ್ಲ ತ್ಯಾಜ್ಯವನ್ನು ಅಳವಡಿಸಿರುವ ಘಟಕಕ್ಕೆ ತುಂಬಿ ಅನಿಲ ಉತ್ಪಾದಿಸಲಾಗುತ್ತಿದೆ. ಸುಮಾರು ಎರಡು ಗಂಟೆಯಷ್ಟು ಅನಿಲ ಲಭ್ಯವಾಗುತ್ತಿದ್ದು, ಎರಡು ಲೀಟರಿನಷ್ಟು ದ್ರವ ಗೊಬ್ಬರ ಕೂಡಾ ಲಭ್ಯವಾಗುತ್ತಿದೆ.
ವಿದ್ಯಾರ್ಥಿಗಳು ಕುತೂಹಲದಿಂದ ಈ ಘಟಕವನ್ನು ಗಮನಿಸುತ್ತಿದ್ದು, ಸರಳ ಮತ್ತು ಪ್ರಾಯೋಗಿಕವಾಗಿ ತ್ಯಾಜ್ಯ ವಿಲೇವಾರಿಯ ಪಾಠವನ್ನು ಕಲಿಯುತ್ತಿದ್ದಾರೆ ಎಂದು ಮುಖ್ಯೋಪಾಧ್ಯಾಯಿನಿ ಶಾರದ ಸಂತಸ ವ್ಯಕ್ತ ಪಡಿಸುತ್ತಿದ್ದಾರೆ.
ಘಟಕ ಅಳವಡಿಕೆ ಹಾಗೂ ತಾಂತ್ರಿಕ ಸಲಹೆಯನ್ನು ತ್ಯಾಜ್ಯ ವಿಲೇವಾರಿ ತಜ್ಞರಾಗಿರುವ ಡಾ ರಾಜೇಶ್ ಬೆಜ್ಜಂಗಳ ನೀಡಿದ್ದಾರೆ. ಎಲ್ಲಾ ಶಾಲೆಗಳಲ್ಲಿ ಇಂಥ ಘಟಕವನ್ನು ಅಳವಡಿಸಿದರೆ , ವಾತಾವರಣದ ತಾಪಮಾನದ ಹೆಚ್ಚಳಕ್ಕೆ ಕಾರಣವಾಗಿರುವ ವಿವಿಧ ಅನಿಲಗಳ ನಿಯಂತ್ರಣ ಸಾಧ್ಯ ಎಂದು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.