ಪುತ್ತೂರು : ಎತ್ತಿನಹೊಳೆ ಯೋಜನೆ ವಿರುದ್ಧ ಪ್ರತಿಭಟನೆ ಸಂಘಟಿಸುವ ಉದ್ದೇಶದಿಂದ ಡಿ.6 ರಂದು ಸಾಯಂಕಾಲ 4 ಕ್ಕೆ ಪುತ್ತೂರು ಅನುರಾಗ ವಠಾರದಲ್ಲಿ ಸಮಾಲೋಚನಾ ಸಭೆ ಕರೆಯಲಾಗಿದೆ. ಡಿ.13ರಂದು ಪುತ್ತೂರು ಪುರಭವನದಲ್ಲಿ ಗಾಂಧೀ ಮಾರ್ಗದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಪುತ್ತೂರು ಎಚ್ಚರ ಬಳಗದ ಗೌರವಾಧ್ಯಕ್ಷ ಪುರಂದರ ಭಟ್ ಹೇಳಿದರು.
ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಎತ್ತಿನ ಹೊಳೆ ಜಾರಿಯಾದರೆ ಪುತ್ತೂರಿನಲ್ಲಿ ಕುಡಿಯುವ ನೀರಿನ ಕೊರತೆ ಏರ್ಪಡಲಿದೆ.
ಹೀಗಾಗಿ ಪ್ರತಿಭಟನೆ ಅಗತ್ಯವಿದೆ ಎಂದ ಅವರು ಪ್ರತಿಭಟನೆಯಿಂದ ಯಾರಿಗೂ ತೊಂದರೆ ಆಗಬಾರದು. ಹೀಗಾಗಿ ಗಾಂಧೀ ಮಾರ್ಗ ಅನುಸರಿಸುತ್ತಿದ್ದೇವೆ. ಯಾರನ್ನು ಬಲವಂತವಾಗಿ ಕರೆದುಕೊಳ್ಳದೇ, ತೊಂದರೆಯೂ ಆಗದಂತೆ ಅಹಿಂಸಾತ್ಮಕವಾಗಿ ಪ್ರತಿಭಟನೆ ಸಂಘಟಿಸುತ್ತೇವೆ. ಸಾರ್ವಜನಿಕವಾಗಿ ಪ್ರತಿಭಟನೆ ನಡೆಸುವ ಅಗತ್ಯತೆಯನ್ನು ಮನಗಂಡಿದ್ದೇವೆ ಎಂದು ಹೇಳಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗುಪ್ತವಾಗಿ ಕೆಲಸ ನಡೆಸುವ ಅಗತ್ಯವಿಲ್ಲ. ಯೋಜನೆ ಜಾರಿಗೆ ಮೊದಲು ಪ್ರಜೆಗಳಿಗೆ ತಿಳಿಸಬೇಕಿತ್ತು.
ಆದ್ದರಿಂದ ಇಂದಿನ ಎಲ್ಲಾ ದುರಂತಗಳಿಗೂ ಜನಪ್ರತಿನಿಧಿಗಳೇ ಕಾರಣ ಎಂದರು. ಹೀಗಾಗಿ ಸಾರ್ವಜನಿಕರೇ ಒಂದಾಗಿ ಪ್ರತಿಭಟನ ನಡೆಸಬೇಕಿದೆ,ಆದ್ದರಿಂದ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳ ಸಹಿತ, ಸಾಹಿತ್ಯ, ಕಲಾ, ಸಾಂಸ್ಕೃತಿಕ, ವರ್ತಕ ಸಂಘಗಳ ವಕ್ತಾರರು ಸಭೆಗೆ ಹಾಜರಾಗುವಂತೆ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಳಗದ ಜಯರಾಮ ಕುಲಾಲ್, ರವೀಂದ್ರ ಸಂಪ್ಯ, ಶೇಷಪ್ಪ ಕುಲಾಲ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.