ಸುಳ್ಯ: ಮಕ್ಕಳಿಗೆ ಪುಸ್ತಕ ರಹಿತ ಎಂದರೆ ಬಹಳ ಖುಷಿ. ಅದು ಇಂತಹ ಬೇಸಿಗೆ ಶಿಬಿರಗಳಲ್ಲಿ ಸಿಗುತ್ತದೆ. ಅವರೊಳಗಿನ ಸೃಜನಶೀಲತೆಯು ಅನಾವರಣವಾಗುವುದು ಇಲ್ಲೇ. ಮನರಂಜನೆಯೊಂದಿಗೆ ಬೌದ್ಧಿಕ ಚಟುವಟಿಕೆಗಳೂ ಇದ್ದಾಗ ಅದು ಮಕ್ಕಳಿಗೆ ಪ್ರಯೋಜನಕಾರಿಯಾಗುತ್ತದೆ ಎಂಬುದಾಗಿ ಕೆ.ವಿ.ಜಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಶೀಲಾ ಜಿ. ನಾಯಕ್ರವರು ಹೇಳಿದರು.
ಅವರು ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಬೇಸಿಗೆ ಶಿಬಿರದ ಸಮಾರೋಪ ಭಾಷಣ ಮಾಡಿದರು. ಇನ್ನೊರ್ವ ಮುಖ್ಯ ಅತಿಥಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಕೆಂಪಲಿಂಗಪ್ಪ ಅವರು ಮಾತನಾಡಿ ಸಮಾಜದಲ್ಲಿ ಬೆರೆಯುವಿಕೆ ಮತ್ತು ನಡವಳಿಕೆಯನ್ನು ಇಂತಹ ಬೇಸಿಗೆ ಶಿಬಿರಗಳು ಕಲಿಸುತ್ತವೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಸಂಚಾಲಕರಾದ ಡಾ. ವಿದ್ಯಾಶಾಂಭವ ಪಾರೆಯವರು ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆ ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಸ್ವಾಗತಿಸಿ ಶಿಬಿರದ ಸಂಚಾಲಕರಾದ ಪ್ರಸನ್ನ ಐವರ್ನಾಡು ವಂದಿಸಿದರು.
ಶಿಬಿರದ ಕುರಿತು ಶಿಬಿರಾರ್ಥಿಗಳಾದ ಕುಮಾರಿ ಅಲಕನಂದಾ ಮತ್ತು ಪೃಥ್ವಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಿಬಿರದಲ್ಲಿ ತಯಾರಾದ ವಿವಿಧ ಸಾಂಸ್ಕೃತಿಕ ವೈಭವಗಳನ್ನು ಮತ್ತು ಕರಕುಶಲ ವಸ್ತುಗಳನ್ನು ಪ್ರದರ್ಶಿಸಲಾಯಿತು. ಶಿಬಿರದಲ್ಲಿ ಪೇಪರ್ಕ್ರಾಫ್ಟ್, ಮೋಜಿನಗಣಿತ, ಮೈಂಡ್ಗೇಮ್ಸ್, ಸರಳವಿಜ್ಞಾನ, ಕಥಾಸಮಯ, ನೃತ್ಯ, ನಾಟಕ, ಔಷಧಿಸಸ್ಯಗಳ ಪರಿಚಯವನ್ನು ಆಯೋಜಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.