ಅಂಕಾರಾ: ಸಿರಿಯಾ ಗಡಿ ಪ್ರದೇಶದಲ್ಲಿ ವೈಮಾನಿಕ ಗಡಿ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿರುವ ಟರ್ಕಿ, ತನ್ನ ವಾಯುಪಡೆ ಸಹಾಯದಿಂದ ರಷ್ಯಾ ನಿರ್ಮಿತ ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಿದೆ.
ಆದರೆ ಟರ್ಕಿಯ ಈ ಆರೋಪವನ್ನು ತಳ್ಳಿ ಹಾಕಿರುವ ರಷ್ಯಾ, ಅದು ಟರ್ಕಿಯ ವೈಮಾನಿಕ ಗಡಿಯನ್ನು ಉಲ್ಲಂಘಿಸಿಲ್ಲ ಎಂದು ಹೇಳಿದೆ.
ಟರ್ಕಿ ಮೂಲಗಳು ಈ ವಿಮಾನವು ರಷ್ಯಾ ನಿರ್ಮಿತ ಎಸ್ಯು-24 ಎಂದು ಹೇಳಿದ್ದು, ಟರ್ಕಿ ಮಿಲಿಟರಿಯು ಇದರ ಮೂಲದ ಕುರಿತು ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಸುಮಾರು 10 ಬಾರಿ ಎಚ್ಚರಿಕೆ ನೀಡಿದ ಬಳಿಕೆ ಈ ವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ಟರ್ಕಿಯ ವಾಯುಪಡೆ ತಿಳಿಸಿದೆ.
ಸಿರಿಯಾದ ಮಾನವ ಹಕ್ಕುಗಳ ಮೇಲ್ವಿಚಾರಣೆ ವೀಕ್ಷಣಾಲಯ ತಂಡವು ಈ ಯುದ್ಧ ವಿಮಾನವು ಲಟಾಕಿಯಾ ಪ್ರಾಂತ್ಯದ ಉತ್ತರ ಭಾಗದ ಪರ್ವತ ಪ್ರದೇಶದಲ್ಲಿ ಅಪ್ಪಳಿಸಿರುವುದಾಗಿ ಹೇಳಿಸಿದೆ. ಈ ಹಿಂದೆ ಈ ಪ್ರಧೇಶದಲ್ಲಿ ಹಲವು ಬಾರಿ ವೈಮಾನಿಕ ಬಾಂಬ್ ದಾಳಿಗಳು ನಡೆದಿದ್ದು, ಸರ್ಕಾರದ ಪಡೆಗಳು ಹಾಗೂ ದಂಗೆಕೋರರ ನಡುವೆ ದಂಗೆಗಳು ನಡೆದಿವೆ ಎಂದು ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.