ಬಂಟ್ವಾಳ : ಪ್ರಮುಖ ನಗರವಾಗಿ ಬೆಳೆಯುತ್ತಿರುವ ಬಂಟ್ವಾಳಕ್ಕೂ ಟ್ರಾಫಿಕ್ ಪೊಲೀಸ್ ಠಾಣೆಯ ಅಗತ್ಯವನ್ನು ಮನಗಂಡ ರಾಜ್ಯ ಗೃಹ ಇಲಾಖೆ ಕೊನೆಗೂ ಟ್ರಾಫಿಕ್ ಪೊಲೀಸ್ ಠಾಣೆಗೆ ಅಸ್ತು ಎಂದಿದ್ದು, ತನ್ಮೂಲಕ ಇಲ್ಲಿನ ವಾಹನ ಚಾಲಕರು, ಸಾರ್ವಜನಿಕರ ಬಹುದಿನದ ಬೇಡಿಕೆಯೊಂದು ಈಡೇರಿದೆ.
ಎ೧೦ರಿಂದ ಮೆಲ್ಕಾರ್ನ ಕಟ್ಟಡವೊಂದರಲ್ಲಿ ತಾತ್ಕಲಿಕ ನೆಲೆಯಲ್ಲಿ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆ ಅಧಿಕೃತವಾಗಿ ಕಾರ್ಯರೂಪಕ್ಕೆ ಬರಲಿದೆ.
ಬಂಟ್ವಾಳ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ಪರಿಶ್ರಮದ ಫಲವಾಗಿ ಟ್ರಾಫಿಕ್ ಪೊಲೀಸ್ ಠಾಣೆ ಮಂಜೂರುಗೊಂಡಿದ್ದು. ಅವರ ಅಭಿವೃದ್ಧಿ ಸಾಧನೆಯ ಮೈಲುಗಲ್ಲಿಗೆ ಮತ್ತೊಂದು ಗರಿ ಮೂಡಿದೆ.
ಈ ಠಾಣೆಯಲ್ಲಿ ಸದ್ಯಕ್ಕೆ ಒರ್ವ ಸಬ್ ಇನ್ಸ್ಪೆಕ್ಟರ್ ಹಾಗೂ ಬೆರೆಳೆಣಿಕೆಯ ಸಿಬ್ಬಂದಿಗಳು ಕರ್ತವ್ಯದಲ್ಲಿರುತ್ತಾರೆ. ಪ್ರಸ್ತುತ ಮೆಲ್ಕಾರ್ನ ಬಾಡಿಗೆ ಕಟ್ಟಡವೊಂದರಲ್ಲಿ ಕಾರ್ಯಾಚರಿಸುವ ಟ್ರಾಫಿಕ್ ಠಾಣೆ ಸ್ವಂತ ಕಟ್ಟಡಕ್ಕಾಗಿ ಬಿ.ಸಿರೋಡು, ಬಂಟ್ವಾಳ ಪರಿಸರದಲ್ಲಿ ಜಮೀನಿನ ಹುಡುಕಾಟವೂ ನಡೆಯುತ್ತಿದೆ.
ಟ್ರಾಫಿಕ್ ಠಾಣೆ ಬಂಟ್ವಾಳ ನಗರ, ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶಗಳನ್ನು ಹೊಂದಲಿದ್ದು, ಇನ್ನು ಮುಂದೆ ಈ ಠಾಣಾ ಸರಹದ್ದಿನಲ್ಲಿ ನಡೆಯುವ ಎಲ್ಲಾ ಅಪಘಾತ ಪ್ರಕರಣಗಳು ಟ್ರಾಫಿಕ್ ಠಾಣೆಯ ಮೆಟ್ಟಿಲು ಹತ್ತಲ್ಲಿದೆ.
ಇದರೊಂದಿಗೆ ಮೊದಲೇ ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿರುವ ಬಂಟ್ವಾಳ ನಗರ, ಗ್ರಾಮಾಂತರ ಹಾಗೂ ವಿಟ್ಲ ಪೊಲೀಸರು ತಮ್ಮ ವ್ಯಾಪ್ತಿಯಲ್ಲಾಗುವ ಅಪಘಾತ ಪ್ರಕರಣಗಳ ಸಹಿತ ಟ್ರಾಫಿಕ್ ಕ್ಲಿಯರ್ ಕಾಂiiದ ಕುರಿತು ತಲೆಕೆಡಿಸುವಂತಿಲ್ಲ.
ಬಿ.ಸಿರೋಡಿನಲ್ಲಿ ತಪ್ಪದ ಬ್ಲಾಕ್
ಬಿ.ಸಿರೋಡಿನಲ್ಲಿ ಚತುಷ್ಪಥ ರಸ್ತೆ ಕಾಮಗಾರಿ ಅದರಲ್ಲೂ ಅವೈಜ್ಞಾನಿಕವಾಗಿ ಮೇಲ್ಸ್ತುವೆ ನಿರ್ಮಿಣವಾದ ಬಳಿಕ ಬಂಟ್ವಾಳ ಪರಿಸರದ ಜನರು ಅನುಭವಿಸುತ್ತಿರುವ ತೊಂದರೆ ಅಷ್ಟಿಷ್ಟಲ್ಲ. ಜೊತೆಗೆ ಪೊಲೀಸರಿಗೂ ಕೂಡಾ ಉಂಟಾಗುತ್ತಿರುವ ಟ್ರಾಫಿಕ್ ಜಾಮ್ ವಸ್ತುಶ: ತಲೆನೋವಾಗಿತ್ತು
ಗೃಹ ರಕ್ಷಕ ದಳದ ಸಿಬ್ಬಂದಿಗಳನ್ನು ಬಳಸಿಕೊಂಡು, ಬಂಟ್ವಾಳ ನಗರ ಪೊಲೀಸರು ಟ್ರಾಫಿಕ್ ಕ್ಲಿಯಾರ್ ಗಾಗಿ ಹರಸಾಹಸ ಪಡುತ್ತಿದ್ದರು. ಸಚಿವ ರಮಾನಾಥ ರೈ ಸಹಿತ ಹಲವಾರು ಗಣ್ಯರು ಟ್ರಾಫಿಕ್ ಜಾಮ್ನ ಬಿಸಿಗೆ ಒಳಗಾಗಿದ್ದರು.
ಹಾಗೆಯೇ ಕಿಷ್ಕಿಂದೆಯಾಗಿರುವ ಬಂಟ್ವಾಳ ನಗರದಲ್ಲಿ ಟ್ರಾಫಿಕ್ ಜಾಮ್ ತಪ್ಪಿದ್ದಲ್ಲ ಪಾಣೆಮಂಗಳೂರು ಮೆಲ್ಕಾರ್ ಕೂಡ ಇದಕ್ಕೆ ಹೊರತಾಗಿಲ್ಲ.ಇವಲ್ಲಕ್ಕೂ ಮುಕ್ತಿ ನೀಡಲೂ ಟ್ರಾಫಿಕ್ ಪೊಲೀಸ್ ಠಾಣೆಯ ಆರಂಭದಿಂದ ಸಾಧ್ಯವಿಲ್ಲ, ಬಿ.ಸಿರೋಡಿನ ರೈಲ್ವೆಯ ಸೇತುವೆ ಕಾಮಗಾರಿ ಪೂರ್ಣಗೊಳ್ಳುವುದು, ಜೊತೆಗೆ ವೃತ್ತದಲ್ಲೂ ಕೆಲಮಾರ್ಪಾಡು ಬಂಟ್ವಾಳ ಪಾಣೆಮಂಗಳೂರು,ಮೆಲ್ಕಾರ್ನಲ್ಲಿ ರಸ್ತೆ ಅಗಲ ಕಾರ್ಯವಾಗಬೇಕೆನ್ನುವ ಆಗ್ರಹಗಳು ಕೇಳಿಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.