ಕಲ್ಲಡ್ಕ : ಶ್ರೀರಾಮ ಪದವಿ ಕಾಲೇಜಿನ ನೂತನ ಪರೀಕ್ಷಾ ಕೇಂದ್ರವು ಸೋಮವಾರದಂದು ಕಾರ್ಯಾರಂಭಗೊಂಡಿತು.2015-16ನೇ ಶೈಕ್ಷಣಿಕ ವರ್ಷದಿಂದ ಮಂಗಳೂರು ವಿಶ್ವವಿದ್ಯಾನಿಲಯವು ನಡೆಸುವ ಪದವಿ ಪರೀಕ್ಷೆಗಳ ಕೇಂದ್ರವಾಗಿ ಸದ್ರಿ ಪರೀಕ್ಷಾ ವಿದ್ಯಾಸಂಸ್ಥೆಗೆ ಮಾನ್ಯತೆ ನೀಡಿದೆ.
ವಿದ್ಯಾಕೇಂದ್ರದ ಸಂಚಾಲಕರಾದ ಡಾ||ಪ್ರಭಾಕರ ಭಟ್ ದೀಪ ಬೆಳಗಿಸಿ ಶುಭ ಹಾರೈಸಿದರು. ಬಿ.ಕಾಂ, ಬಿ.ಎ ಹಾಗೂ ಬಿಬಿಎಂನ 370 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಒಟ್ಟು 24 ದಿನಗಳಲ್ಲಿ 36ಕ್ಕೂ ಹೆಚ್ಚು ಅವಧಿಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.
ಡಿಸೆಂಬರ್ 11ರ ವರೆಗೆ ಈ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದ್ದು, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷರಾಗಿ ಪ್ರಾಚಾರ್ಯ ಕೃಷ್ಣಪ್ರಸಾದ ಕಾಯಾರ್ಕಟ್ಟೆ, ಉಪಅಧೀಕ್ಷಕರಾಗಿ ರಾಮಕುಂಜ ಕಾಲೇಜಿನ ಕೃಷ್ಣಮೂರ್ತಿ ಕೆ. ಹಾಗೂ ಮುಖ್ಯ ಮೇಲ್ವಿಚಾರಕರಾಗಿ ರಂಜಿತ ಹಾಗೂ ಸಹಾಯಕರಾಗಿ ಶುಭಲಕ್ಷ್ಮಿ ನಿಯೋಜನೆಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.