ನವದೆಹಲಿ: ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ನಮಗೆ ಏಕ್ ಭಾರತವನ್ನು ನೀಡಿದರು, ಅದನ್ನು ನಾವು ಶ್ರೇಷ್ಠ ಭಾರತವನ್ನಾಗಿಸಬೇಕಾಗಿದೆ. ಅವರ ಜೀವನ ಮತ್ತು ಅವರು ದೇಶದ ಏಕತೆ, ಸಮಗ್ರತೆಗೆ ನೀಡಿದ ಕಾಣಿಕೆಯಿಂದ ನಾವು ಸ್ಫೂರ್ತಿ ಪಡೆಯಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಶನಿವಾರ ಪಟೇಲ್ ಅವರ 140ನೇ ಜನ್ಮದಿನದ ಅಂಗವಾಗಿ ರಾಜಪಥ್ನಲ್ಲಿ ‘ಏಕತಾ ಓಟ’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಏಕತೆ ನಮ್ಮ ಶಕ್ತಿ, ಅಭಿವೃದ್ಧಿಯ ತುತ್ತ ತುದಿಯನ್ನು ತಲುಪಲು ಏಕತೆ, ಶಾಂತಿ ಮತ್ತು ಸಾಮರಸ್ಯ ಅತ್ಯಗತ್ಯ ಎಂದರು.
ಪಟೇಲ್ ಅವರು ಕುಟುಂಬ ರಾಜಕಾರಣದಲ್ಲಿ ಎಂದೂ ನಿರತರಾಗಿರಲಿಲ್ಲ, ತನ್ನ ಕುಟುಂಬ ಸದಸ್ಯರನ್ನು ಅವರೆಂದೂ ರಾಜಕೀಯಕ್ಕೆ ಪರಿಚಯಿಸಲಿಲ್ಲ ಎನ್ನುವ ಮೂಲಕ ಕಾಂಗ್ರೆಸ್ಗೆ ಪರೋಕ್ಷ ಟಾಂಗ್ ನೀಡಿದರು.
ತಾಯಿ ಭಾರತಿಯನ್ನು ಜಗತ್ತಿನ ಉನ್ನತ ಮಟ್ಟಕ್ಕೆ ಏರಿಸಬೇಕೆಂಬ ಗುರಿ ನಮಗಿದ್ದರೆ, ಅದಕ್ಕೆ ಪ್ರಥಮವಾಗಿ ಬೇಕಾಗಿರುವುದು ಏಕತೆ, ಶಾಂತಿ, ಸಾಮರಸ್ಯ. ಈ ಮಂತ್ರದೊಂದಿಗೆ 125 ಕೋಟಿ ಭಾರತೀಯರು ದೇಶವನ್ನು ಮುನ್ನಡೆಸಿದರೆ ನಾವು 125 ಕೋಟಿ ಹೆಜ್ಜೆ ಮುಂದೆ ಸಾಗುತ್ತೇವೆ ಎಂದರು.
ನಮ್ಮ ದೇಶ ಏಕತೆಯಿಂದ ಒಟ್ಟಾಗಿರುವುದೇ ನಮ್ಮ ಶಕ್ತಿ, ಏಕತೆಗಾಗಿ ನಾವು ಏನನ್ನು ತ್ಯಾಗ ಮಾಡಲು ಸಿದ್ಧ ಎಂಬುದು ಸರ್ದಾರ್ ಪಟೇಲ್ ಅವರ ಸಂದೇಶವಾಗಿತ್ತು ಎಂದರು.
ಅಲ್ಲದೇ ಅತಿ ಶೀಘ್ರದಲ್ಲೇ ‘ಏಕ ಭಾರತ್, ಶ್ರೇಷ್ಠ ಭಾರತ್’ ಎಂಬ ಯೋಜನೆಯನ್ನು ಆರಂಭಿಸುವುದಾಗಿ ಅವರು ಈ ಸಂದರ್ಭದಲ್ಲಿ ಘೋಷಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.