ನವದೆಹಲಿ: ಪಾಕಿಸ್ಥಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಶರಫ್ ಅವರು ಶಿವಸೇನೆಯ ಮಾಜಿ ವರಿಷ್ಠ ಬಾಳಾ ಠಾಕ್ರೆ ಅವರನ್ನು ಉಗ್ರ ಸಯೀದ್ ಹಫೀಸ್ಗೆ ಹೋಲಿಸಿದ್ದಾರೆ.
ಪಾಕಿಸ್ಥಾನದ ಟಿವಿ ಚ್ಯಾನೆಲ್ ಒಂದಕ್ಕೆ ಸಂದರ್ಶನ ನೀಡಿದ ಸಂದರ್ಭ ಮುಶರಫ್, ಶಿವಸೇನೆ ಹಾಗೂ ಆರ್ಎಸ್ಎಸ್ ಅನ್ನು ಉಗ್ರ ಸಂಘಟನೆಗೆ ಹೋಲಿಸಿದ್ದಾರೆ. 1990ರಲ್ಲಿ ಕಾಶ್ಮೀರದಲ್ಲಿ ನಡೆದ ಹೋರಾಟದ ಸಂದರ್ಭ ಹಲವಾರು ಮಂದಿ ಸಾವನ್ನಪ್ಪಿದು, ಇಲ್ಲಿಂದ ಪಾಕಿಸ್ಥಾನಕ್ಕೆ ಬಂದವರು ಉಗ್ರರಾಗಿ ಬದಲಾಗಿದ್ದಾರೆ ಎಂದು ಹೇಳಿದ್ದಾರೆ.
ಪಾಕಿಸ್ಥಾನದ ಮಾಜಿ ಸಚಿವ ಕಸೂರಿ ಪುಸ್ತಕ ಬಿಡುಗಡೆ ಘಟನೆ, ಗುಲಾಂ ಅಲಿ ಅವರ ಸಂಗೀತ ಕಚೇರಿ ನಿಷೇಧ, ಭಾರತ-ಪಾಕ್ ಕ್ರಿಕೆಟ್ ಪಂದ್ಯ ರದ್ದು ಮುಂತಾದ ಘಟನೆಗಳನ್ನು ಶಿವಸೇನೆ ಮಾಡಿದೆ. ಶಿವಸೇನೆಯ ಬಾಳಾ ಠಾಕ್ರೆ ಉಗ್ರರಾಗಿದ್ದು ಅವರನ್ನು ಏಕೆ ಬಂಧಿಸಿರಲಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಇನ್ನು ಸಂಜೋತಾ ರೈಲು ಸ್ಫೋಟದಲ್ಲಿ 100 ಮಂದಿ ಪಾಕಿಸ್ಥಾನಿ ಪ್ರಜೆಗಳು ಸಾವನ್ನಪ್ಪಿದ್ದು, ಸೇನಾ ಕರ್ನಲ್ ಓರ್ವರು ಇದರಲ್ಲಿ ಭಾಗಿಯಾಗಿದ್ದಾರೆ. ಹಫೀಸ್ರನ್ನು ತನಗೆ ಒಪ್ಪಿಸಲು ಹೇಳುವ ಭಾರತ, ಮೊದಲು ಕರ್ನಲ್ರನ್ನು ಪಾಕಿಸ್ಥಾನಕ್ಕೆ ಒಪ್ಪಿಸಲಿ ಎಂದು ಆಗ್ರಹಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.