News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 12th November 2026

×
Home About Us Advertise With s Contact Us

ದೆಹಲಿಯಲ್ಲಿ ಸ್ಥಾಪನೆಯಾಗಲಿದೆ “‘ಯುಗೇ ಯುಗೀನ್ ಭಾರತ ಮ್ಯೂಸಿಯಂʼ

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ನಾರ್ತ್ ಮತ್ತು ಸೌತ್ ಬ್ಲಾಕ್ ಸಂಕೀರ್ಣದಲ್ಲಿ ‘ಯುಗೇ ಯುಗೀನ್ ಭಾರತ ವಸ್ತುಸಂಗ್ರಹಾಲಯ’ (Yuge Yugeen Bharat Museum) ಅಭಿವೃದ್ಧಿಪಡಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಅವರು, ಈ ವಸ್ತುಸಂಗ್ರಹಾಲಯವು ಸಮಕಾಲೀನ ವಸ್ತುಸಂಗ್ರಹಾಲಯ ಪದ್ಧತಿಗಳು, ತಲ್ಲೀನಗೊಳಿಸುವ ತಂತ್ರಜ್ಞಾನಗಳು (immersive technologies) ಮತ್ತು ಸಂದರ್ಶಕ-ಕೇಂದ್ರಿತ ನಿರೂಪಣಾ ವಿಧಾನಗಳನ್ನು ಒಳಗೊಂಡಿರಲಿದೆ ಎಂದು ತಿಳಿಸಿದರು.

‘ಯುಗ ಯುಗೀನ್ ಭಾರತ ವಸ್ತುಸಂಗ್ರಹಾಲಯ’ವು ನವದೆಹಲಿಯನ್ನು ಸಾಂಸ್ಕೃತಿಕ ಪರಂಪರೆಯ ಜಾಗತಿಕ ಕೇಂದ್ರವನ್ನಾಗಿ ಪರಿವರ್ತಿಸಲಿದೆ ಮತ್ತು ಇದು ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯ ಪ್ರದರ್ಶನ ಪ್ರದೇಶವನ್ನು ಹೊಂದಿರಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಪೋಸ್ಟ್ ಒಂದರಲ್ಲಿ, ಐತಿಹಾಸಿಕ ‘ನಾರ್ತ್ ಬ್ಲಾಕ್’ ಮತ್ತು ‘ಸೌತ್ ಬ್ಲಾಕ್’ ಕಟ್ಟಡಗಳನ್ನು ಭಾರತದ ನಾಗರಿಕತೆಯ ಪಯಣದ ಭವ್ಯ ಸಂಕೇತಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆಗೆ, ಸಚಿವ ಸಂಪುಟದ ಈ ನಿರ್ಧಾರವು ಚಾಲನೆ ನೀಡಲಿದೆ ಎಂದು ಪ್ರಧಾನ ಮಂತ್ರಿಯವರು ಉಲ್ಲೇಖಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top