ನವದೆಹಲಿ: ಬ್ಯಾಂಕ್ ಠೇವಣಿ ಯೋಜನೆ ಅಡಿಯಲ್ಲಿ ಚಿನ್ನವನ್ನು ಬ್ಯಾಂಕ್ಗಳಲ್ಲಿ ಇಡುವ ಮೂಲಕ ಹಳದಿ ಲೋಹವನ್ನು ನಿಯಂತ್ರಿಸುವ ಹೊಸ ಯೋಜನೆ ಶೀಘ್ರದಲ್ಲೇ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇದರಿಂದ ದುಬಾರಿ ಹಳದಿ ಲೋಹದ ಆಮದು ತಡೆಯುಲು ಸಹಾಯಕವಾಗಲಿದೆ. ಜನರು ತಮ್ಮ ಚಿನ್ನವನ್ನು ಬ್ಯಾಂಕ್ಗಳಲ್ಲಿ ಹೂಡಿಕೆ ಮಾಡುವ ಪ್ರತಿಯಾಗಿ ಬಡ್ಡಿ ಪಡೆಯಲಿದ್ದು, ಸಾವಿರಾರು ಟನ್ಗಳಷ್ಟು ಹಳದಿ ಲೋಹವನ್ನು ಚಲಾವಣೆಗೆ ತರುವಂತೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಚಿನ್ನವನ್ನು ಉಡುಗೊರೆಯಾಗಿ ಪಡೆಯುತ್ತಿರುವ ಭಾರತೀಯರು ಈ ಸಂಪತ್ತನ್ನು ಶೇಖರಿಸಿಡುತ್ತಾರೆ. ವಾರ್ಷಿಕ ಸುಮಾರು 1,000 ಟನ್ಗಳಷ್ಟು ಚಿನ್ನ ಆಮದು ಮಾಡಲಾಗುತ್ತಿದ್ದು, ತೈಲದ ಬಳಿಕ ಅತ್ಯಂತ ದುಬಾರಿಯೆನಿಸಿದೆ.
ಚಿನ್ನವು ದೇಶಕ್ಕೆ ಅತಿ ಮುಖ್ಯವಾಗಿದ್ದು, ದೇಶದ ಆರ್ಥಿಕ ಶಕ್ತಿಯಾಗಿದೆ. ಚಿನ್ನದ ಆಮದಿನಿಂದ 2013ರಲ್ಲಿ 190 ಬಿಲಿಯನ್ ಡಾಲರ್ ದೇಶದ ಚಾಲ್ತಿ ಖಾತೆಯಲ್ಲಿ ಕೊರತೆ ಉಂಟಾಗಿದೆ ಆಪಾದಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.