
ನವದೆಹಲಿ: ರಾಷ್ಟ್ರ ಮತ್ತು ಅದರ ಶ್ರೀಮಂತ ಪರಂಪರೆ ಎರಡನ್ನೂ ರಕ್ಷಿಸುವ ಧ್ಯೇಯವಾಕ್ಯದೊಂದಿಗೆ ಮುನ್ನಡೆಯುತ್ತಿರುವ ಭಾರತೀಯ ಸೇನೆಯು ದೇಶದ ಅತ್ಯಂತ ದೂರದ ಗಡಿಗಳಲ್ಲಿ ದೃಢನಿಶ್ಚಯದಿಂದ ದೇಶದ ಕಾವಲು ಕಾಯುತ್ತಿದೆ. ಈ ಪ್ರಮುಖ ವಲಯಗಳಲ್ಲಿ ಸಮುದಾಯಗಳ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಕಾಯಕವನ್ನೂ ಜತನದಿಂದ ಮಾಡುತ್ತಿದೆ.
ಭಾರತದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಪರಂಪರೆಯ ರೋಮಾಂಚಕ ಆಚರಣೆಯಲ್ಲಿ, ಭಾರತೀಯ ಸೇನೆಯ ಸ್ಪಿಯರ್ಕಾರ್ಪ್ಸ್ನ ಸ್ಪಿಯರ್ಹೆಡ್ ವಿಭಾಗವು ಏಪ್ರಿಲ್ 20 ರಂದು ವಿಶ್ವ ಪರಂಪರೆಯ ದಿನದಂದು ಅರುಣಾಚಲ ಪ್ರದೇಶದ ಟ್ಯೂಟಿಂಗ್ನ ಸೋಲುಂಗ್ ಮೈದಾನದಲ್ಲಿ ಬುಡಕಟ್ಟು ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿತು.
ಈ ಕಾರ್ಯಕ್ರಮವು ಅರುಣಾಚಲ ಪ್ರದೇಶದ ಶ್ರೀಮಂತ ಸಂಪ್ರದಾಯಗಳನ್ನು ಪ್ರದರ್ಶಿಸಿತು, ಆದಿ, ಮೆಂಬಾ-ಖಂಬಾ ಮತ್ತು ಇಡು ಮಿಶ್ಮಿ ಬುಡಕಟ್ಟು ಜನಾಂಗದ ಸದಸ್ಯರ ಆಕರ್ಷಕ ಪ್ರದರ್ಶನಗಳು ನಡೆದವು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯೋಮಾನದವರೂ ತಮ್ಮ ವರ್ಣರಂಜಿತ ಸಾಂಪ್ರದಾಯಿಕ ಉಡುಪಿನಲ್ಲಿ ಉತ್ಸಾಹದಿಂದ ಭಾಗವಹಿಸಿದರು. ಅವರ ಪ್ರದರ್ಶನಗಳು ತಲೆಮಾರುಗಳಿಂದ ಸಂರಕ್ಷಿಸಲ್ಪಟ್ಟ ವಿಶಿಷ್ಟ ಪದ್ಧತಿಗಳು, ಸಂಗೀತ ಮತ್ತು ನೃತ್ಯ ಪ್ರಕಾರಗಳನ್ನು ಎತ್ತಿ ತೋರಿಸಿದವು.
ಸಾಂಸ್ಕೃತಿಕ ಜಾಗೃತಿ ಮೂಡಿಸುವುದು, ಸ್ಥಳೀಯ ಸಮುದಾಯಗಳೊಂದಿಗೆ ಬಾಂಧವ್ಯವನ್ನು ಬಲಪಡಿಸುವುದು ಮತ್ತು ಪ್ರದೇಶದ ಅಮೂಲ್ಯ ಪರಂಪರೆಯನ್ನು ಸಂರಕ್ಷಿಸುವ ಕಡೆಗೆ ಭಾರತೀಯ ಸೇನೆಯ ಬದ್ಧತೆಯನ್ನು ಬಲಪಡಿಸುವ ಸಲುವಾಗಿ ಆಪರೇಷನ್ ಸದ್ಭಾವನದ ಅಡಿಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


